Home ಟಾಪ್ ಸುದ್ದಿಗಳು ನಾಡಿನೆಲ್ಲೆಡೆ ಸಂಭ್ರಮದ ಈದ್ ಮಿಲಾದ್ ಆಚರಣೆ

ನಾಡಿನೆಲ್ಲೆಡೆ ಸಂಭ್ರಮದ ಈದ್ ಮಿಲಾದ್ ಆಚರಣೆ

ಬೆಂಗಳೂರು: ಪ್ರವಾದಿ ಮುಹಮ್ಮದ್‌ ಪೈಗಂಬರರ ಜನ್ಮ ದಿನಾಚರಣೆಯನ್ನು ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಹಲವು ಕಡೆಗಳಲ್ಲಿ ಇಂದು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಮದರಸಾ ಮಕ್ಕಳಿಂದ ಪ್ರವಾದಿ ಕುರಿತ ಗಾನಗೀತೆಗಳು, ಪ್ರಭಾಷಣಗಳು ಮತ್ತಿತರ ಹಲವು ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಜ್ಯದ ನಾನಾ ಕಡೆಯಲ್ಲಿ ಏರ್ಪಡಿಸಲಾಯಿತು. ಕಾಲ್ನಡಿಗೆ ಜಾಥಾ ಮೂಲಕ ಪ್ರವಾದಿ ಜೀವನ ಸಂದೇಶವನ್ನು ಸಾರಲಾಯಿತು.

ದ.ಕ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಉಳ್ಳಾಲ, ಪುತ್ತೂರು,ಸುಳ್ಯ ಸೇರಿದಂತೆ ಹಲವು ಕಡೆಗಳಲ್ಲಿ ಜಾಥಾ ಮೂಲಕ ಸಂಭ್ರಮದ ಈದ್‌ ಮಿಲಾದ್‌ ಆಚರಿಸಲಾಯಿತು.

Join Whatsapp
Exit mobile version