Home ಕರಾವಳಿ ಶಿಕ್ಷಣ ತಜ್ಞೆ ಡಾ. ಝೀಟಾ ಲೋಬೊಗೆ “ಕಲ್ಲಚ್ಚು” ಪ್ರಶಸ್ತಿ

ಶಿಕ್ಷಣ ತಜ್ಞೆ ಡಾ. ಝೀಟಾ ಲೋಬೊಗೆ “ಕಲ್ಲಚ್ಚು” ಪ್ರಶಸ್ತಿ

ಮಂಗಳೂರು: ಸಾಹಿತ್ಯ ವಲಯದಲ್ಲಿ ಕಳೆದ 22 ವರ್ಷಗಳಿಂದ ಸಕ್ರಿಯವಾಗಿರುವ ಕಲ್ಲಚ್ಚು ಪ್ರಕಾಶನ ವಾರ್ಷಿಕವಾಗಿ ಕೊಡಮಾಡುವ,  13 ನೇ ಆವೃತ್ತಿಯ 2022ರ “ಕಲ್ಲಚ್ಚು ಪ್ರಶಸ್ತಿಗೆ” ಲೇಖಕಿ, ಕಲಾವಿದೆ ಮತ್ತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ತಜ್ಞೆ ಡಾ.ಝೀಟಾ ಲೋಬೊ ಆಯ್ಕೆಯಾಗಿದ್ದಾರೆ.

ಕನ್ನಡ, ಇಂಗ್ಲಿಷ್ ಮತ್ತು ಕೊಂಕಣಿ ಭಾಷೆಯ ಸಾಹಿತ್ಯ ಕೃತಿಗಳನ್ನು ರಚಿಸಿರುವ ಇವರು ಅತ್ಯುತ್ತಮ ಚಿತ್ರ ಕಲಾವಿದೆಯಾಗಿದ್ದು ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆ ಮಾಡಿರುವ ಅನುಭವ ಹೊಂದಿದ್ದಾರೆ. ನವಂಬರ್ 27 ಆದಿತ್ಯವಾರದಂದು ಸಂಜೆ 4 ಗಂಟೆಗೆ ಮಂಗಳೂರಿನ Woodlands Hotel ನಲ್ಲಿ ಜರಗಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ಕೆ. ರಮೇಶ ನಾಯಕ್ ರಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಡಾ.  ಹಿಮ ಉರ್ಮಿಳಾ ಶೆಟ್ಟಿ, ಅನಿಲ್ ಕುಮಾರ್ ಶಾಸ್ತ್ರಿ, ಫಾತಿಮಾ ರಲಿಯಾ  ಮತ್ತು ಧರ್ಮದರ್ಶಿ ಹರಿಕೃಷ್ಣ ಪುನರೂರು ಆತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಪ್ರಕಾಶನದ ಮುಖ್ಯಸ್ಥ ಸಾಹಿತಿ ಮಹೇಶ ಆರ್. ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version