Home ಟಾಪ್ ಸುದ್ದಿಗಳು ಟಿಆರ್ ಪಿ ಹಗರಣಕ್ಕೆ ರಿಪಬ್ಲಿಕ್ ಟಿವಿ ನೇರ ಹೊಣೆ, ಪೊಲೀಸರು ಪತ್ರಕರ್ತರನ್ನು ಬಲಿಪಶುಗಳನ್ನಾಗಿ ಮಾಡಬಾರದು :...

ಟಿಆರ್ ಪಿ ಹಗರಣಕ್ಕೆ ರಿಪಬ್ಲಿಕ್ ಟಿವಿ ನೇರ ಹೊಣೆ, ಪೊಲೀಸರು ಪತ್ರಕರ್ತರನ್ನು ಬಲಿಪಶುಗಳನ್ನಾಗಿ ಮಾಡಬಾರದು : ಎಡಿಟರ್ಸ್ ಗಿಲ್ಡ್

ಮುಂಬೈ : ಟಿಆರ್ ಪಿ ಹಗರಣ ವಿಚಾರವಾಗಿ ರಿಪಬ್ಲಿಕ್ ಟಿವಿ ಸಂಪಾದಕೀಯ ತಂಡದ ವಿರುದ್ಧ  ಮುಂಬಯಿ ಪೊಲೀಸರು ಎಫ್ ಐಆರ್ ದಾಖಲಿಸಿದ ಬೆನ್ನಿಗೆ ಎಚ್ಚೆತ್ತುಕೊಂಡ ಮುಂಬೈ ಎಡಿಟರ್ಸ್ ಗಿಲ್ಡ್ ಸೋಮವಾರ ರಿಪಬ್ಲಿಕ್ ಟಿವಿ ಸಂಪಾದಕೀಯ ತಂಡದ ಪರವಹಿಸಿದೆ.

`ಮಾಧ್ಯಮವು ಜವಾಬ್ದಾರಿಯುತವಾಗಿ ವರ್ತಿಸಬೇಕು. ಪತ್ರಕರ್ತರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿಮಾಡಿಕೊಳ್ಳಬಾರದು’ ಎಂದು ಅದು ರಿಪಬ್ಲಿಕ್ ಟಿವಿಗೆ ಸಲಹೆಯಿತ್ತಿದೆ.  

ಪೊಲೀಸರ ತನಿಖೆಯ ಹಾದಿಯಲ್ಲಿ ನಾವು ಯಾವುದೇ ಪ್ರಭಾವವನ್ನು ಬೀರಲು ಬಯಸುವುದಿಲ್ಲ. ಪತ್ರಕರ್ತರನ್ನು ಬಲಿಪಶುಗಳನ್ನಾಗಿ ಮಾಡುವ ಕಾರ್ಯವು ತಕ್ಷಣವೇ ನಿಲ್ಲಿಸಬೇಕು. ನಿರಂಕುಶ ರಾಜ್ಯಾಧಿಕಾರವು ಎಂದಿಗೂ ಕಾರ್ಯನಿರತ ಪತ್ರಕರ್ತರ ಹಿತಾಸಕ್ತಿಯ ಪರ ನಿಂತಿಲ್ಲ ಎಂದು ಎಡಿಟರ್ಸ್ ಗಿಲ್ಡ್ ಹೇಳಿಕೆ ನೀಡಿದೆ.

ಮಾಧ್ಯಮದ ಸಂಘಟಿತ ವಿಶ್ವಾಸಾರ್ಹತೆಗೆ ಹಾನಿಯುಂಟುಮಾಡದಂತೆ ಗಿಲ್ಡ್ ರಿಪಬ್ಲಿಕ್ ಟಿವಿಯನ್ನು ಕೋರಿದೆ. ಟೆಲಿವಿಷನ್ ರೇಟಿಂಗ್ ಪಾಯಿಂಟ್ ತಿರುಚಿದ ಆರೋಪವು ರಿಪಬ್ಲಿಕ್ ಟಿವಿಯ ವಿರುದ್ಧ ಕೇಳಿ ಬಂದಿದ್ದು ಇದೀಗ ತನಿಖೆಯನ್ನು ಮುಂದುವರಿಯುತ್ತಿದೆ.

Join Whatsapp
Exit mobile version