Home ಟಾಪ್ ಸುದ್ದಿಗಳು ಎಡ್ಜ್ ಬಾಸ್ಟನ್ ಟೆಸ್ಟ್: ಬೃಹತ್ ಮುನ್ನಡೆಯತ್ತ ಭಾರತ

ಎಡ್ಜ್ ಬಾಸ್ಟನ್ ಟೆಸ್ಟ್: ಬೃಹತ್ ಮುನ್ನಡೆಯತ್ತ ಭಾರತ

ಇಂಗ್ಲೆಂಡ್ : ಟೀಮ್ ಇಂಡಿಯಾ ನಡುವೆ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಮಹತ್ವದ ಟೆಸ್ಟ್ ಪಂದ್ಯವು ಕುತೂಹಲಕಾರಿ ಘಟ್ಟ ತಲುಪಿದೆ. ಮೂರನೇ ದಿನದಾಟದ ಅಂತ್ಯಕ್ಕೆ ದ್ವಿತೀಯ ಇನ್ನಿಂಗ್ಸ್ ನಲ್ಲಿ ಭಾರತ, 3 ವಿಕೆಟ್ ನಷ್ಟದಲ್ಲಿ 125 ರನ್ ಗಳಿಸಿದ್ದು, ಒಟ್ಟು 257 ರನ್ ಗಳ ಮುನ್ನಡೆ ಸಾಧಿಸಿದೆ. ಇನ್ನು ಎರಡು ದಿನಗಳ ಆಟ ಬಾಕಿಯಿದ್ದು, ಭಾರತ ಐತಿಹಾಸಿಕ  ಸರಣಿ ಗೆಲುವಿನತ್ತ ದಾಪುಗಾಲಿಟ್ಟಿದೆ.  400 ರನ್ ಮುನ್ನಡೆ ಸಾಧಿಸಿದರೆ, ನಾಲ್ಕನೇ ದಿನ ಬುಮ್ರಾ ಪಡೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಸಾಧ್ಯತೆಯಿದೆ.

ಜಾನಿ ಬೆಸ್ಟೋ ಶತಕದ ಆಸರೆ

ಮೊದಲ ಇನ್ನಿಂಗ್ಸ್ ನಲ್ಲಿ ಕುಸಿತ ಕಂಡ ಆಂಗ್ಲ ಪಡೆಗೆ ಜಾನಿ ಬೆಸ್ಟೊ (106) ಶತಕದ ಆಸರೆಯಾದರು. ಅದಾಗಿಯೂ ಇಂಗ್ಲೆಂಡ್ ತಂಡವನ್ನು 284 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಭಾರತದ ಬೌಲರ್ ಗಳು ಯಶಸ್ವಿಯಾದರು. 132 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಶುಭ್ಮನ್ ಗಿಲ್ 4 ರನ್ ಗಳಿಸುವಷ್ಟರಲ್ಲೇ ವಿಕೆಟ್ ಒಪ್ಪಿಸಿದರೆ, ಮೂರನೇ ಕ್ರಮಾಂಕದಲ್ಲಿ ಬಂದ ಹನುಮ ವಿಹಾರಿ ಕೊಡುಗೆ 11 ರನ್. ಜವಾಬ್ದಾರಿಯುತ ಇನ್ನಿಂಗ್ಸ್ ಆಡಬೇಕಿದ್ದ ಮಾಜಿ ನಾಯಕ ಕೊಹ್ಲಿ ಮತ್ತೆ ವಿಫಲದರು.  40 ಎಸೆತಗಳನ್ನು ಎದುರಿಸಿ 20 ರನ್ ಗಳಿಸಿದ್ದ ವೇಳೆ ಬೆನ್ ಸ್ಟೋಕ್ಸ್ ಬೌಲಿಂಗ್ ನಲ್ಲಿ ರೂಟ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ತಾಳ್ಮೆಯ ಬ್ಯಾಟಿಂಗ್ ನಡೆಸಿದ ಚೇತೇಶ್ವರ್ ಪೂಜಾರ 50 ರನ್ ಮತ್ತು 30 ರನ್ನೊಂದಿಗೆ ರಿಷಭ್ ಪಂತ್ ಸೋಮವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

ಸಿರಾಜ್, ಬುಮ್ರಾ ದಾಳಿಗೆ ಬೆದರಿದ ಆಂಗ್ಲ ಪಡೆ

ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದ ಇಂಗ್ಲೆಂಡ್, ಭಾರತದ ವೇಗದ ಬೌಲಿಂಗ್ ವಿಭಾಗವನ್ನು ಎದುರಿಸುವಲ್ಲಿ ವಿಫಲವಾಯಿತು. ಅಗ್ರ ಕ್ರಮಾಂಕದ ಮೂವರು ಬ್ಯಾಟ್ಸ್ ಮನ್ ಗಳು ಎರಡಂಕಿಯ ಮೊತ್ತವನ್ನು ದಾಟಲು ಬುಮ್ರಾ ಅವಕಾಶ ನೀಡಲಿಲ್ಲ. ಕೇವಲ 11.3 ಓವರ್ಗಳ ದಾಳಿಯಲ್ಲಿ ಮುಹಮ್ಮದ್ ಸಿರಾಜ್ ನಾಲ್ಕು ವಿಕೆಟ್ ಪಡೆದರು. ಮುಹಮ್ಮದ್ ಶಮಿ ಎರಡು ಮತ್ತು ಶಾರ್ದೂಲ್ ಠಾಕೂರ್ ಒಂದು ವಿಕೆಟ್ ಪಡೆದರು. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿದ ಇಂಗ್ಲೆಂಡ್ ಗೆ ಜಾನಿ  ಬೆಸ್ಟೊ ಆಸರೆಯಾದರು. 140 ಎಸೆತಗಳನ್ನು ಎದುರಿಸಿದ ಬೆಸ್ಟೋ, ಎರಡು ಸಿಕ್ಸರ್ ಮತ್ತು 14 ಬೌಂಡರಿಗಳ ನೆರವಿನಿಂದ 106 ರನ್ಗಳಿಸಿ ಶಮಿ ಬೌಲಿಂಗ್ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದರು. ಕೀಪರ್ ಸ್ಯಾಮ್ ಬಿಲ್ಲಿಂಗ್ 36 ರನ್ ಮತ್ತು ನಾಯಕ ಬೆನ್ ಸ್ಟೋಕ್ಸ್ 25 ರನ್ ಗಳಿಸಿದರು.

Join Whatsapp
Exit mobile version