Home ಟಾಪ್ ಸುದ್ದಿಗಳು ಜುಲೈ 1ರಂದು ವಿಚಾರಣೆಗೆ ಹಾಜರಾಗಿ: ಡಿಕೆ ಶಿವಕುಮಾರ್’ಗೆ ಇಡಿ ಸಮನ್ಸ್

ಜುಲೈ 1ರಂದು ವಿಚಾರಣೆಗೆ ಹಾಜರಾಗಿ: ಡಿಕೆ ಶಿವಕುಮಾರ್’ಗೆ ಇಡಿ ಸಮನ್ಸ್

ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಡಿ ವಿಚಾರಣೆ ಎದುರಿಸುತ್ತಿರುವ ಬೆನ್ನಲ್ಲೇ, ಆದಾಯ, ಆಸ್ತಿ ತೆರಿಗೆ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್’ಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಜುಲೈ1 ರಂದು ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಸೂಚನೆ ನೀಡಿದೆ.

ಇಡಿ ಸಮನ್ಸ್ ಕುರಿತು ಪ್ರತಿಕ್ರಿಯಿಸಿರುವ ಡಿಕೆಶಿ, ಚಾರ್ಜ್ ಶೀಟ್ ಮೂರು ತಿಂಗಳ ಹಿಂದೆ ಮಾಡಬೇಕಿತ್ತು. ಆದರೆ ಈಗ ಚಾರ್ಜ್ ಶೀಟ್ ಹಾಕಿ ಐದು ಜನರಿಗೆ ಸಮನ್ಸ್ ನೀಡಿದ್ದಾರೆ. ಸಿಬಿಐ ಕೂಡ ಹೊಸ ನೋಟಿಸ್ ನೀಡಿದೆ. ಸಾಮಾನ್ಯವಾಗಿ ಚಾರ್ಜ್ ಶೀಟ್ ಆದ ಬಳಿಕ ಕೋರ್ಟ್ಗೆ ಹೋಗಬೇಕು. ಕಾನೂನಿಗೆ ಗೌರವ ನೀಡಿ ಜುಲೈ 1ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ.

Join Whatsapp
Exit mobile version