ಬೆಂಗಳೂರು: SDPI ರಾಜ್ಯ ಕಚೇರಿ ಮೇಲೆ ED ದಾಳಿ

- Advertisement -

►ಎಂಕೆ ಫೈಝಿ ಪ್ರಕರಣಕ್ಕೆ ಸಂಬಂಧಿಸಿ 10 ರಾಜ್ಯಗಳಲ್ಲಿ ED ಶೋಧ

- Advertisement -


ಬೆಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ರಾಜ್ಯ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಶೋಧ ಕಾರ್ಯ ಮುಂದುವರೆದಿದೆ.


ಬೆಳಿಗ್ಗೆ 11 ಗಂಟೆಗೆ ಇಬ್ಬರು ಅಧಿಕಾರಿಗಳ ನೇತೃತ್ವದ ಇಡಿ ತಂಡ ಕಾರ್ಪೊರೇಷನ್ ಬಳಿ ಇರುವ ಎಸ್ ಡಿಪಿಐ ರಾಜ್ಯ ಕಚೇರಿ ಮೇಲೆ ದಾಳಿ ನಡೆಸಿದೆ. ಈ ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಎಸ್ ಡಿಪಿಐ ರಾಷ್ಟ್ರಾಧ್ಯಕ್ಷ ಎಂಕೆ ಫೈಝಿ ಅವರನ್ನು ಇ.ಡಿ ಬಂಧಿಸಿರುವ ಬೆನ್ನಲ್ಲೆ ಈ ದಾಳಿ ನಡೆದಿರುವುದರಿಂದ ಆ ಪ್ರಕರಣಕ್ಕೂ ಈ ದಾಳಿಗೂ ಸಂಬಂಧ ಇರುವ ಸಾಧ್ಯತೆ ಇದೆ.

- Advertisement -


ಕರ್ನಾಟಕ ಮಾತ್ರವಲ್ಲದೆ ದೆಹಲಿಯಲ್ಲಿರುವ ಎಸ್ ಡಿಪಿಐ ಪ್ರಧಾನ ಕಚೇರಿ ಸೇರಿದಂತೆ 10 ರಾಜ್ಯಗಳ 12 ಕಡೆಗಳಲ್ಲಿ ಇ.ಡಿ ಇಂದು ದಾಳಿ ನಡೆಸಿದೆ. ಕೇರಳದ ತಿರುವನಂತಪುರ ಮತ್ತು ಮಲಪ್ಪುರಂ, ಆಂಧ್ರಪ್ರದೇಶದ ನಂದ್ಯಾಲ್, ಜಾರ್ಖಂಡ್ ನ ಪಾಕುರ್, ಮಹಾರಾಷ್ಟ್ರದ ಠಾಣೆ, ಚೆನ್ನೈ, ಕೋಲ್ಕತ್ತಾ, ಲಖನೌ ಮತ್ತು ಜೈಪುರದಲ್ಲಿ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.


ಈ ಕುರಿತು ಪ್ರತಿಕ್ರಿಯಿಸಿರುವ ಎಸ್ ಡಿಪಿಐ ರಾಜ್ಯ ಮುಖಂಡರು, ಯಾವ ಕಾರಣಕ್ಕೆ ಇ.ಡಿ ದಾಳಿ ನಡೆಸಿದೆ ಎಂಬುದನ್ನು ತಿಳಿಸಿಲ್ಲ. ದಾಳಿ ವೇಳೆ ಆಫೀಸ್ ಬಾಯ್ ಮತ್ತು ಕಾರ್ಯದರ್ಶಿ ಕಚೇರಿಯಲ್ಲಿದ್ದರು. ಈಗಲೂ ಶೋಧ ನಡೆಯುತ್ತಿದೆ ಎಂದು ತಿಳಿಸಿದರು. ವಕ್ಫ್ ತಿದ್ದುಪಡಿ ಮಸೂದೆ ವಿರುದ್ಧ ಹೋರಾಡುತ್ತಿರುವ ಕಾರಣಕ್ಕೆ ನಮ್ಮನ್ನು ಭಯಪಡಿಸಲು ಕೇಂದ್ರ ಸರ್ಕಾರ ಇ.ಡಿಯನ್ನು ಬಳಸುತ್ತಿದೆ. ಆದರೆ ನಮ್ಮ ಮೇಲೆ ಎಷ್ಟೇ ದಾಳಿ ನಡೆದರೂ ನಾವು ಹೋರಾಟದಿಂದ ಹಿಂದೆ ಸರಿಯಲ್ಲ ಎಂದಿದ್ದಾರೆ.

- Advertisement -


Must Read

Related Articles