Home ಟಾಪ್ ಸುದ್ದಿಗಳು ಸಚಿವ ಸುಧಾಕರ್ ಆಪ್ತ ಮನೆ ಮೇಲೆ ಇ.ಡಿ ದಾಳಿ

ಸಚಿವ ಸುಧಾಕರ್ ಆಪ್ತ ಮನೆ ಮೇಲೆ ಇ.ಡಿ ದಾಳಿ

ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ನಿರ್ದೇಶಕ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಆಪ್ತ ಅಶ್ವತ್ಥನಾರಾಯಣ ಬಾಬು ಅವರ ಚಿಂತಾಮಣಿಯ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ಕೋಚಿಮುಲ್ ಇತ್ತೀಚೆಗೆ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿತ್ತು.


ಚಿಂತಾಮಣಿ ತಾಲ್ಲೂಕಿನಿಂದ ಅಶ್ವತ್ಥನಾರಾಯಣ ಬಾಬು ಕೋಚಿಮುಲ್ ನಿರ್ದೇಶಕರಾಗಿದ್ದಾರೆ.

Join Whatsapp
Exit mobile version