Home ಟಾಪ್ ಸುದ್ದಿಗಳು ಅಕ್ರಮ ಹಣ ವರ್ಗಾವಣೆ ಪ್ರಕರಣ: AAP ಸಂಸದ ಸಂಜೀವ್ ಅರೋರಾ ಮನೆ ಮೇಲೆ ಇಡಿ ದಾಳಿ

ಅಕ್ರಮ ಹಣ ವರ್ಗಾವಣೆ ಪ್ರಕರಣ: AAP ಸಂಸದ ಸಂಜೀವ್ ಅರೋರಾ ಮನೆ ಮೇಲೆ ಇಡಿ ದಾಳಿ

ಗುರುಗ್ರಾಮ್: AAP ರಾಜ್ಯಸಭಾ ಸದಸ್ಯ ಸಂಜೀವ್ ಅರೋರಾ ಮತ್ತಿತರರ ವಿರುದ್ಧದ ಭೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಸೋಮವಾರ ಜಲಂಧರ್, ಲೂಧಿಯಾನ, ಗುರುಗ್ರಾಮ್ ಮತ್ತು ದೆಹಲಿಯ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ಲೂಧಿಯಾನ (ಪಂಜಾಬ್) ಮತ್ತು ಗುರುಗ್ರಾಮ್ ದಲ್ಲಿರುವ (ಹರಿಯಾಣ) 61 ವರ್ಷದ ಅರೋರಾ ಅವರ ಮನೆ ಸೇರಿದಂತೆ ಸುಮಾರು 16-17 ಕಡೆಗಳಲ್ಲಿ ಶೋಧಿಸಲಾಗುತ್ತಿದೆ. ಜಲಂಧರ್ನಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಹೇಮಂತ್ ಸೂದ್ ಮತ್ತು ಮತ್ತೊಬ್ಬ ವ್ಯಕ್ತಿ ಚಂದ್ರಶೇಖರ್ ಅಗರವಾಲ್ಗೆ ಸಂಬಂಧಿಸಿದ ಮನೆಗಳಲ್ಲಿಯೂ ಶೋಧ ಕಾರ್ಯ ನಡೆಸಲಾಗುತ್ತಿದೆ ಎನ್ನಲಾಗಿದೆ.


ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸಂಜೀವ್ ಅರೋರಾ, ಶೋಧ ಕಾರ್ಯಾಚರಣೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಾನು ಕಾನೂನು ಪಾಲಿಸುವ ನಾಗರಿಕನಾಗಿದ್ದೇನೆ, ಶೋಧ ಕಾರ್ಯಾಚರಣೆಯ ಕಾರಣದ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಏಜೆನ್ಸಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ ಮತ್ತು ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Join Whatsapp
Exit mobile version