ನಾಗ್ಪುರ : ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ರವರಿಗೆ ಸೇರಿದ ನಾಗ್ಪುರದ ವಾಡ್ವಿಹಿರಾ ಮತ್ತು ಕಟೋಲ್ ಎಂಬಲ್ಲಿನ ಪೂರ್ವಜರ ಮನೆಗಳ ಮೇಲಿನ 100 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಭಾನುವಾರ ಬೆಳಿಗ್ಗೆ ದಾಳಿ ನಡೆಸಿದೆ. ಕೇಂದ್ರ ತನಿಖಾ ಸಂಸ್ಥೆ (ಎನ್.ಐ.ಎ) ಯು ಎರಡು ದಿನಗಳ ಹಿಂದೆ ಮನಿ ಲಾಂಡರಿಂಗ್ ಪ್ರಕರಣದಲ್ಲಿ ನ್ಯಾಷನಲಿಷ್ಟ್ ಕಾಂಗ್ರೆಸ್ ಪಕ್ಷ (ಎನ್.ಸಿ.ಪಿ) ನಾಯಕನಿಗೆ ಸೇರಿದ್ದ 4.20 ಕೋಟಿ ಮೌಲ್ಯದ ಆಸ್ತಿಯನ್ನು ಪತ್ತೆಹಚ್ಚಿತ್ತು.
ಭಾನುವಾರ ಬೆಳಿಗೆ ಸರಿಸುಮಾರು 7 ಘಂಟೆಗೆ ದೇಶ್‌ಮುಖ್ ಅವರ ನಿವಾಸ ತಲುಪಿದ ಜಾರಿ ನಿರ್ದೇಶಾಲಯದ 6 ಅಧಿಕಾರಿಗಳು ಕೇಂದ್ರ ಮೀಸಲು ಪಡೆ (ಸಿಆರ್‌ಪಿಎಫ್) ಯ ತಂಡದ ಸಹಯೋಗದೊಂದಿಗೆ ದೇಶ್‌ಮುಖ್ ಅವರ ಎರಡು ಮನೆಗಳನ್ನು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ಇನ್ನು ಮುಂದುವರಿದಿದೆಯೆಂದು ಹೇಳಲಾಗಿದೆ.
ಕಳೆದ ಶುಕ್ರವಾರ ಮುಂಬೈಯ ವರ್ಲಿಯ ಎಂಬಲ್ಲಿ ದೇಶ್‌ಮುಖ್ ಒಡೆತನತ ಒಡೆತನದ 1.54 ಕೋಟಿ ಮೌಲ್ಯ ಒಂದು ಪ್ಲಾಟ್, ರಾಯ್ಘರ್ ಜಿಲ್ಲೆಯ ಧತುಮ್ ಎಂಬಲ್ಲಿ 2.67 ಕೋಟಿ ಮೌಲ್ಯದ 25 ಸೆಂಟ್ಸ್ ಭೂಮಿಯನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿತ್ತು. ಮಾತ್ರವಲ್ಲದೇ ದೇಶ್‌ಮುಖ್ ಅವರ ಪತ್ನಿ ಆರತಿ ದೇಶ್‌ಮುಖ್ ಅವರಿಗೆ ವಿಚಾರಣೆಗೆ ಆಗಮಿಸುವಂತೆ ಸಮನ್ಸ್ ಜಾರಿಗೊಳಿಸಲಾಗಿತ್ತು.
ಮಾತ್ರವಲ್ಲದೇ ಮಹಾರಾಷ್ಟ್ರ ಸಚಿವರಾಗಿದ್ದ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಮತ್ತು ಇತರರು ಸೇರಿ ದೇಶ್‌ಮುಖ್ ಯೋಜನೆಯಂತೆ ಮುಂಬೈನ ಬಾರ್ ಮತ್ತು ರೆಸ್ಟೋರೆಂಟ್ ಗಳಿಂದ ಪ್ರತಿತಿಂಗಳು 100 ಕೋಟಿ ಲಂಚದ ಮೂಲಕ ಸುಲಿಗೆ ಮಾಡುವಂತೆ ತನ್ನ ಮೇಲೆ ಒತ್ತಡ ಹೇರಿದ್ದಾರೆಂದು ಮುಂಬೈನ ಮಾಜಿ ಪೊಲೀಸ್ ಆಯುಕ್ತರಾದ ಪರಂಬೀರ್ ಸಿಂಗ್ ರವರು ಆರೋಪಿಸಿದ್ದಾರೆ.
ಈ ಆರೋಪದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಸಿಬಿಐ (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ತನಿಖೆಗೆ ಆದೇಶಿಸಿತು ಮತ್ತು ಸಿಬಿಐ ಈ ವರ್ಷದ ಏಪ್ರಿಲ್‌ನಲ್ಲಿ ದೇಶಮುಖ್ ವಿರುದ್ಧ ಎಫ್ಐಆರ್ ದಾಖಲಿಸಿದೆ. ತನಿಖೆಗೆ ಅಗಮಿಸುವಂತೆ ಕೋರಿ ದೇಶಮುಖ್ ಮತ್ತು ಅವರ ಕುಟುಂಬ ಸದಸ್ಯರಿಗೆ ಸಮನ್ಸ್ ಜಾರಿಗೊಳಿಸಿತ್ತು. ಅದೇ ರೀತಿ ಕಳೆದ ತಿಂಗಳು ದೇಶಮುಖ್ ಅವರ ಪಿಎ ಕುಂದನ್ ಶಿಂಧೆ ಮತ್ತು ಪಿಎಸ್ ಸಂಜೀವ್ ಪಾಲಂಡೆ ಅವರನ್ನು ಬಂಧಿಸಿತ್ತು.
ಜಾರಿ ನಿರ್ದೇಶನಾಲಯ (ಇಡಿ) ಸಂಸ್ಥೆ ಭಾನುವಾರ ದಾಳಿ ನಡೆಸುತ್ತಿರುವ ವೇಳೆಯಲ್ಲಿ ಕಟೋಲ್ ಮತ್ತು ವಾಡ್ವಿಹಿರಾ ಮೆನೆಗಳಲ್ಲಿ ದೇಶಮುಖ್ ಅಥವಾ ಅವರ ಆಪ್ತರು ಇರಲಿಲ್ಲವೆಂದು ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ಇಲ್ಲಿನ ಸಿವಿಲ್ ಲೈನ್ಸ್ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಅವರ ಪತ್ನಿ ಆರತಿ ಮತ್ತು ಮಗ ರಿಷಿಯನ್ನು ವಿಚಾರಣೆ ನಡೆಸಿದ್ದರು.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ದೆಹಲಿಯಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ನಂತರ ಮಾಜಿ ಗೃಹ ಸಚಿವರಾದ ಅನಿಲ್ ದೇಶಮುಖ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸುತ್ತಿರುವುದು ಸಾಕಷ್ಟು ಕುತೂಹಲ ಸೃಷ್ಟಿಸಿದೆ.