Home ಟಾಪ್ ಸುದ್ದಿಗಳು ರೈಲ್ವೇ ಹಳಿ ಮೇಲೆ ಇ.ಡಿ ಅಧಿಕಾರಿಯ ಮೃತದೇಹ ಪತ್ತೆ

ರೈಲ್ವೇ ಹಳಿ ಮೇಲೆ ಇ.ಡಿ ಅಧಿಕಾರಿಯ ಮೃತದೇಹ ಪತ್ತೆ

ನವದೆಹಲಿ: ಜಾರಿ ನಿರ್ದೇಶನಾಲಯದ ಅಧಿಕಾರಿಯೊಬ್ಬರ ಮೃತದೇಹ ರೈಲ್ವೇ ಹಳಿ ಮೇಲೆ ಪತ್ತೆಯಾಗಿದೆ.


ಗಾಝಿಯಾಬಾದ್ ಮೂಲದ ಅಲೋಕ್ ಕುಮಾರ್ ಮೃತರು.


ದೆಹಲಿ ಹತ್ತಿರದ ಸಾಹಿಬಾಬಾದ್ ರೈಲ್ವೇ ಹಳಿ ಮೇಲೆ ಅಲೋಕ್ ಕುಮಾರ್ ಅವರ ಮೃತದೇಹ ಪತ್ತೆಯಾಗಿದೆ.


ಭ್ರಷ್ಟಾಚಾರದ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಅಲೋಕ್ ಕುಮಾರ್ ಡೆಪ್ಯುಟೇಷನ್ ಮೇಲೆ ನವದೆಹಲಿಯ ಇ.ಡಿ ಕಚೇರಿಗೆ ವರ್ಗಾವಣೆಯಾಗಿದ್ದರು. ಅವರು ಆದಾಯ ತೆರಿಗೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

Join Whatsapp
Exit mobile version