FIR ದಾಖಲಿಸದೆ ವಿಚಾರಣೆ ನಡೆಸಲು ED ಗೆ ಅಧಿಕಾರವೇ ಇಲ್ಲ: ಚಿದಂಬರಂ

Prasthutha|

ನವದೆಹಲಿ : ಯಾವುದೇ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗದೆ ಸಮನ್ಸ್ ನೀಡಲು, ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಅಧಿಕಾರವೇ ಇಲ್ಲ ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

- Advertisement -

ಈ ಕುರಿತು ಟ್ವೀಟ್ ಮಾಡಿರುವ ಅವರು, ಎಫ್‌ಐಆರ್ ದಾಖಲಾಗದೆ ಸಮನ್ಸ್ ನೀಡಲು, ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಅಧಿಕಾರವೇ ಇಲ್ಲ ರಾಹುಲ್ ಗಾಂಧಿ ಅವರನ್ನು ಯಾವ ಸೆಕ್ಷನ್ ಮೇಲೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಬಿಜೆಪಿಯಲ್ಲಿರುವ ಖ್ಯಾತ ವಕ್ತಾರರು ದಯವಿಟ್ಟು ತಮ್ಮ ಪ್ರಶ್ನೆಗಳಿಗೆ ಉತ್ತರಿಸುವರೇ? ಜಾರಿ ನಿರ್ದೇಶನಾಲಯದ ಯಾವ ನಿಗದಿತ ಅಪರಾಧಕ್ಕಾಗಿ ರಾಹುಲ್‍ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿದೆ ಎಂದಿದ್ದಾರೆ.



Join Whatsapp