ನವದೆಹಲಿ: ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಭಾರತದಿಂದ ಪರಾರಿಯಾದ ನೀರವ್ ಮೋದಿಗೆ ಸಂಬಂಧಿಸಿದ ವಜ್ರಗಳು, ಆಭರಣಗಳು ಮತ್ತು ಬ್ಯಾಂಕ್ ಠೇವಣಿಗಳು ಸೇರಿ 253.62 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿದೆ.
ಇದರೊಂದಿಗೆ, ಪ್ರಕರಣದಲ್ಲಿ ಒಟ್ಟು ಮುಟ್ಟುಗೋಲು ಹಾಕಿಕೊಂಡ ಮತ್ತು ವಶಪಡಿಸಿಕೊಂಡ ಆಸ್ತಿಗಳ ಮೌಲ್ಯ 2,650.07 ಕೋಟಿಯಷ್ಟಿದೆ ಎಂದು ಇಡಿ ತನ್ನ ವರದಿಯಲ್ಲಿ ತಿಳಿಸಿದೆ.
ಪಿಎನ್ಬಿ ಬ್ಯಾಂಕ್ ಗೆ 6,498.20 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ 50 ವರ್ಷದ ನೀರವ್ ಮೋದಿ ಪ್ರಸ್ತುತ ಬ್ರಿಟನ್ ಜೈಲಿನಲ್ಲಿದ್ದಾರೆ .
ಮನಿ ಲಾಂಡರಿಂಗ್ ತಡೆ ಕಾಯ್ದೆ, 2002 (ಪಿಎಂಎಲ್ಎ) ಅಡಿಯಲ್ಲಿ ಇಸಿಐಆರ್ ಅನ್ನು ದಾಖಲಿಸುವ ಮೂಲಕ ತನಿಖೆಯನ್ನು ಪ್ರಾರಂಭಿಸಿದ್ದು ಇದೀಗ 253.62 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿದೆ.