Home ಟಾಪ್ ಸುದ್ದಿಗಳು ಹವಾಲಾ ಆರೋಪ ‘ಜಾಯ್ ಅಲುಕ್ಕಾಸ್’ಗೆ ಸೇರಿದ 305 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡ ED

ಹವಾಲಾ ಆರೋಪ ‘ಜಾಯ್ ಅಲುಕ್ಕಾಸ್’ಗೆ ಸೇರಿದ 305 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಂಡ ED

ತಿರುವನಂತಪುರ: ಕೇರಳದ ಆಭರಣ ಮಳಿಗೆಗಳ ಮಾಲಿಕರಾದ ಜಾಯ್ ಅಲುಕ್ಕಾಸ್ ವರ್ಗೀಸ್’ರಿಗೆ ಸೇರಿದ 305 ಕೋಟಿ ರೂಪಾಯಿ ಮೌಲ್ಯದ ಸಂಪತ್ತನ್ನು ಹವಾಲಾ ಆರೋಪದ ಮೇಲೆ ಇಡಿ- ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.


ಹವಾಲಾ ಮೂಲಕ ಕಂಪೆನಿಯು ಭಾರೀ ಮೊತ್ತದ ಹಣವನ್ನು ದುಬೈಗೆ ವರ್ಗಾಯಿಸಿದೆ ಎಂದು ಫೆಮಾ ಮೊಕದ್ದಮೆ ದಾಖಲಾಗಿತ್ತು. ಫೆಬ್ರವರಿ 22ರಂದು ತ್ರಿಶೂರಿನ ಮುಖ್ಯ ಕೇಂದ್ರಗಳ ಮೇಲೆ ದಾಳಿ ನಡೆಸಿದ ಕೇಂದ್ರೀಯ ಏಜೆನ್ಸಿ ಶುಕ್ರವಾರ ಈ ಮುಟ್ಟುಗೋಲು ಹಾಕಿಕೊಂಡಿದೆ.


“ತ್ರಿಶೂರಿನಲ್ಲಿರುವ 81.54 ಕೋಟಿ ರೂಪಾಯಿ ಮೌಲ್ಯದ ಶೋಭಾ ಸಿಟಿ ಕಟ್ಟಡ, ಮನೆ ಇತ್ಯಾದಿ ಸೊತ್ತುಗಳು; ತ್ರಿಶೂರು ಬ್ಯಾಂಕುಗಳಲ್ಲಿದ್ದ ರೂ. 91.22 ಲಕ್ಷ, ರೂ. 5.58 ಕೋಟಿ ಮೌಲ್ಯದ ಫಿಕ್ಸೆಡ್ ಡಿಪಾಜಿಟ್, ಜಾಯ್ ಅಲುಕ್ಕಾಸ್ ಇಂಡಿಯಾ ಪ್ರೈ. ಲಿ.ಗೆ ಸೇರಿದ 217.81 ಕೋಟಿ ಮೌಲ್ಯದ ಶೇರುಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಜಾರಿನಿರ್ದೇಶನಾಲಯ ಹೇಳಿದೆ.
ಫೆಮಾ- ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯಡಿ ಒಟ್ಟು 305.84 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಮುಟ್ಟುಗೋಲು ಹಾಕಿಕೊಂಡಿರುವುದಾಗಿ ED ಸ್ಪಷ್ಟಪಡಿಸಿದೆ.

Join Whatsapp
Exit mobile version