Home ಟಾಪ್ ಸುದ್ದಿಗಳು ED ದಾಳಿ: ಪಂಜಾಬ್‌ ಮುಖ್ಯಮಂತ್ರಿ ಚನ್ನಿ ಸೋದರಳಿಯನ ಬಂಧನ

ED ದಾಳಿ: ಪಂಜಾಬ್‌ ಮುಖ್ಯಮಂತ್ರಿ ಚನ್ನಿ ಸೋದರಳಿಯನ ಬಂಧನ

ಚಂಡೀಗಢ: ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED)ವು ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸೋದರಳಿಯ ಭೂಪಿಂದರ್‌ ಸಿಂಗ್‌ ಹನಿ ಎಂಬುವವರನ್ನು ಗುರುವಾರ ಸಂಜೆ ಬಂಧಿಸಿದೆ.

ಪ್ರಕರಣದಲ್ಲಿ ಭೂಪಿಂದರ್‌ ಅವರನ್ನು ಗುರುವಾರವಿಡೀ ತೀವ್ರ ವಿಚಾರಣೆ ನಡೆಸಿದ ED, ಅಂತಿಮವಾಗಿ ಸಂಜೆ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ಡೆ (ಪಿಎಂಎಲ್‌ಎ) ಅಡಿಯಲ್ಲಿ ಭೂಪಿಂದರ್‌ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಪಂಜಾಬ್‌ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ. ಫೆ. 20ರಂದು ಮತದಾನ ನಡೆಯಲಿದ್ದು, ಮಾರ್ಚ್‌ 10ರಂದು ಫಲಿತಾಂಶ ಬರಲಿದೆ.

Join Whatsapp
Exit mobile version