ಅಕ್ಟೋಬರ್ 30 ಕ್ಕೆ 3 ಲೋಕಸಭೆ, 30 ಅಸೆಂಬ್ಲಿ ಸ್ಥಾನಗಳಿಗೆ ಉಪಚುನಾವಣೆ : ಭಾರತೀಯ ಚುನಾವಣಾ ಆಯೋಗ

Prasthutha|

ನವದೆಹಲಿ: ಭಾರತೀಯ ಚುನಾವಣಾ ಆಯೋಗವು ಅಕ್ಟೋಬರ್ 30 ರಂದು ವಿವಿಧ ರಾಜ್ಯಗಳಿಗೆ ಉಪ ಚುನಾವಣೆಗಳನ್ನು ಘೋಷಣೆ ಮಾಡಿದೆ. ಇದರಲ್ಲಿ ಮೂರು ಲೋಕಸಭಾ ಮತ್ತು 30 ಅಸೆಂಬ್ಲಿ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

- Advertisement -

ಈ ಉಪಚುನಾವಣೆಯ ಮತ ಎಣಿಕೆ ಮತ್ತು ಫಲಿತಾಂಶ ನವೆಂಬರ್ 2 ರಂದು ನಡೆಯಲಿದೆ.

ದಾದ್ರ – ಹವೇಲಿ, ದಿಯು, ಮಧ್ಯಪ್ರದೇಶ ಮತ್ತು ಹಿಮಾಚಲದ ಯುಟಿ ಎಂಬಲ್ಲಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಮಾತ್ರವಲ್ಲ ವಿಧಾನಸಭಾ ಕ್ಷೇತ್ರದ 30 ಕಡೆಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

- Advertisement -

ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ದಿನ್ಹಾಟಾ, ಶಾಂತಿಪುರ, ಖರ್ದಹಾ ಮತ್ತು ಗೋಸಬಾ ಎಂಬಲ್ಲಿ ಉಳಿದ ಸ್ಥಾನಗಳಿಗೆ ಉಪಚುನಾವಣೆಗೆ ದಿನಾಂಕಗಳನ್ನು ಘೋಷಿಸಿದೆ.



Join Whatsapp