ಬೆಂಗಳೂರು: ಭಾರತ್ ಗ್ಯಾಸ್ ನ ಬೆಂಗಳೂರು ವಿಭಾಗದಿಂದ ಎರಡನೇ ಸಿಲಿಂಡರ್ ಪಡೆಯುವುದನ್ನು ಪ್ರೋತ್ಸಾಹಿಸಲು ಸಂಕ್ರಾಂತಿಯಿಂದ ಯುಗಾದಿವರೆಗೆ ವಿಶೇಷ ಡಿಬಿಸಿ ಲಕ್ಕಿ ಡ್ರಾ ಮೇಳ ಆಯೋಜಿಸಲಾಗಿದೆ.
ಎರಡನೇ ಸಿಲಿಂಡರ್ ಪಡೆಯುವ ಗ್ರಾಹಕರಿಗೆ ಲಕ್ಕಿ ಕೂಪನ್ ನೀಡುತ್ತಿದ್ದು, ಒಟ್ಟು 500 ಬಹುಮಾನಗಳನ್ನು ಗೆಲ್ಲಲು ಅವಕಾಶವಿದೆ. ಡಿಸ್ಟ್ರಿಬ್ಯೂಟರ್ ಗಳ ಮೂಲಕ ಗ್ರಾಹಕರಿಗೆ 10 ಲಕ್ಷ ರೂಪಾಯಿ ಮೌಲ್ಯದ ಬಹುಮಾನಗಳು ದೊರೆಯಲಿದ್ದು, ಮೊದಲ ಬಹುಮಾನ ಸ್ಕೂಟರ್, ಎರಡನೇ ಬಹುಮಾನ 5 ಜನರಿಗೆ ಎಲ್.ಇ.ಡಿ ಟಿವಿ, 3ನೇ ಬಹುಮಾನವಾಗಿ 8 ಜನರಿಗೆ ಮೊಬೈಲ್ ಪೋನ್ ನೀಡಲಾಗುತ್ತಿದೆ.
ಹೊಸ ಮತ್ತು ಎರಡನೇ ಸಿಲಿಂಡರ್ ಪಡೆಯುವುದು ಇದೀಗ ಹಿಂದೆಂದಿಗಿಂತ ಸುಲಭವಾಗಿದ್ದು,+91 9611100111 ಸಂಖ್ಯೆಗೆ ಕರೆ ಮಾಡಿದರೆ ಅಥವಾ ವಾಟ್ಸ್ ಅಪ್ ಮೂಲಕ ಮಾಹಿತಿ ನೀಡಿದರೆ ಸುಲಭವಾಗಿ ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ದೊರೆಯಲಿದೆ. ಈಗ ಬಿಪಿಸಿಎಲ್ ಪ್ರತಿ ಶನಿವಾರದಂದು ಗ್ರಾಹಕರ ಪ್ರಯೋಜನಕ್ಕಾಗಿ “ಗ್ರಾಹಕ ಸಂಪರ್ಕ” ಕಾರ್ಯಕ್ರಮ ಪ್ರಾರಂಭಿಸಿದ್ದು, ಗ್ರಾಹಕರ ಕುಂದುಕೊರತೆ ನಿವಾರಿಸಲಾಗುತ್ತಿದೆ.