ವಿಜಯಪುರದಲ್ಲಿ ಮತ್ತೆ ಭೂಕಂಪ, ಕೊಲ್ಲಾಪುರದ ಆತಂಕ ಜೀವಂತ!

Prasthutha|

ವಿಜಯಪುರ: ಸೆಪ್ಟೆಂಬರ್ 11ರ ಶನಿವಾರ ಬೆಳಿಗ್ಗೆ 8.18ರಿಂದ 8.20 ಗಂಟೆಗಳ ನಡುವೆ ವಿಜಯಪುರದ ಜಲನಗರ, ಕೀರ್ತಿ ನಗರಗಳಲ್ಲಿ ಭೂಮಿ ನಡುಗಿದ ಅನುಭವವಾಗಿದ್ದು, ನೆಲದಡಿಯಿಂದ ಭಾರೀ ಶಬ್ದ ಕೇಳಿಸಿದೆ. ಜನ ಭಯಭೀತರಾಗಿದ್ದಾರೆ.

- Advertisement -


ಬೆಂಗಳೂರಿನ ಪ್ರಕೃತಿ ವಿಕೋಪ ಸಂಸ್ಥೆಯನ್ನು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಸಂಪರ್ಕಿಸಿದಾಗ ರಿಕ್ಟರ್ ಮಾಪಕದಲ್ಲಿ ಭೂಕಂಪ ದಾಖಲಾಗದಿರುವುದು ತಿಳಿದು ಬಂದಿದೆ.


ಸೆಪ್ಟೆಂಬರ್ 4ರಂದು ರಾತ್ರಿ 11.47 ಹಾಗೂ 11.49 ಗಂಟೆಯ ಅವಧಿಯಲ್ಲಿ ಇದೇ ರೀತಿ ವಿಜಯಪುರದಲ್ಲಿ ಭೂಮಿ ನಡುಗಿತ್ತು. ಆಗ ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆಯ ಭೂಕಂಪ ದಾಖಲಾಗಿತ್ತು. ಆ ಭೂಕಂಪನ ಕೇಂದ್ರ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿತ್ತು.



Join Whatsapp