ಸುಳ್ಯ: ಸುಳ್ಯದಲ್ಲಿ ಮತ್ತೆ ಭೂಮಿ ಕಂಪಿಸಿರುವ ಅನುಭವ ಉಂಟಾಗಿದೆ. ಸಂಜೆ 4:40ರ ಸುಮಾರಿಗೆ ಸುಳ್ಯದ ಸಂಪಾಜೆ, ಗೂನಡ್ಕ ಸೇರಿದಂತೆ ಕೆಲವೆಡೆ ಭೂಮಿ ಕಂಪಿಸಿದೆ.
ಇಂದು ಬೆಳಗ್ಗೆ 7.45 ರ ವೇಳೆಗೆ ಬಹುತೇಕ ಕಡೆ ಶಬ್ದದೊಂದಿಗೆ ಎರಡು ಮೂರು ಸೆಕೆಂಡುಗಳಷ್ಟು ಕಂಪಿಸಿತ್ತು. ಒಂದು ವಾರಗಳಲ್ಲಿ ಒಟ್ಟು ಮೂರು ಬಾರಿ ಸುಳ್ಯದಲ್ಲಿ ಭೂಮಿ ಕಂಪಿಸಿದ್ದು, ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.