ನವದೆಹಲಿ: ದೊಡ್ಡ ಭೂಕಂಪದಿಂದಾಗಿ ನೂರಾರು ಸಾವು ನೋವಿನಿಂದ ಚೇತರಿಸಿಕೊಳ್ಳುತ್ತಿರುವ
ನೇಪಾಳದಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ. ಇಂದು ಮಧ್ಯಾಹ್ನ ಮತ್ತೆ 5.6 ತೀವ್ರತೆಯ ಭೂಕಂಪ ಅಲ್ಲಿ ಸಂಭವಿಸಿದೆ. ಭಾರತದ ರಾಜಧಾನಿ ದೆಹಲಿ ಮತ್ತು ಹತ್ತಿರದ ನಗರಗಳಲ್ಲಿಯೂ ಮತ್ತೆ ಭೂಕಂಪನದ ಅನುಭವಾಗಿದೆ. ದೆಹಲಿಯಲ್ಲಿ ಡೆಸ್ಕ್ ಮತ್ತು ಪೀಠೋಪಕರಣಗಳ ತೀವ್ರ ಅಲುಗಾಡುವಿಕೆಯ ಅನುಭವವಾಗಿದೆ.
ಜನರು ವಸತಿ ಕಟ್ಟಡಗಳಿಂದ ಹೊರಬರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಕಳೆದ ಶುಕ್ರವಾರ ನೇಪಾಳದಲ್ಲಿ 6.4 ತೀವೃತೆಯ ಪ್ರಬಲವಾದ ಭೂಕಂಪವಾಗಿ ಕನಿಷ್ಠ 157 ಜನರು ಸಾವಿಗೀಡಾಗಿದ್ದಾರೆ. ಇದು 2015 ರಿಂದ ನೇಪಾಳದಲ್ಲಿ ಸಂಭವಿಸಿದ ಅತ್ಯಂತ ಭೀಕರ ಭೂಕಂಪವಾಗಿದೆ. ದೆಹಲಿಯಲ್ಲೂ ಅಂದೇ ಭೂಕಂಪ ಅನುಭವ ಆಗಿತ್ತು.