Home ಟಾಪ್ ಸುದ್ದಿಗಳು ಇ-ಸ್ಕೂಟರ್‌ ಗಳ ಸ್ಫೋಟ ಪ್ರಕರಣ: ತಜ್ಞರ ಸಮಿತಿ ರಚನೆ

ಇ-ಸ್ಕೂಟರ್‌ ಗಳ ಸ್ಫೋಟ ಪ್ರಕರಣ: ತಜ್ಞರ ಸಮಿತಿ ರಚನೆ

ಹೊಸದಿಲ್ಲಿ: ಇತ್ತೀಚೆಗೆ ಎರಡು ವಿದ್ಯುತ್‌ ಚಾಲಿತ ಸ್ಕೂಟರ್‌ ಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಈ ಪ್ರಕರಣಗಳಿಗೆ ಕಾರಣವೇನೆಂದು ತನಿಖೆ ಮಾಡಲು ಕೇಂದ್ರ ಸರಕಾರ ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿದೆ.

ಕಳೆದ ವಾರ ಓಲಾ ಎಸ್‌1 ಪ್ರೊ ಎಲೆಕ್ಟ್ರಿಕ್‌ ಸ್ಕೂಟರ್‌ ಗೆ ಪುಣೆಯಲ್ಲಿ ಬೆಂಕಿ ಹತ್ತಿಕೊಂಡಿತ್ತು. ಆದರೆ ಪ್ರಾಣಹಾನಿಯಾಗಿರಲಿಲ್ಲ. ಇದಾದ ಬಳಿಕ ವೆಲ್ಲೂರಿನಲ್ಲಿ ಒಕಿನಾವ ಕಂಪೆನಿಯ ಸ್ಕೂಟರ್‌ ಗೂ ಬೆಂಕಿ ಹತ್ತಿಕೊಂಡಿತ್ತು. ಅದರಿಂದಾಗಿ ತಂದೆ-ಮಗಳು ತೀರಿಕೊಂಡಿದ್ದರು. ಈ ಎರಡೂ ಪ್ರಕರಣಗಳನ್ನು ತನಿಖೆ ನಡೆಸಲು ಸರ್ಕಾರ ಸಮಿತಿಯೊಂದನ್ನು ರಚಿಸಿದೆ.

Join Whatsapp
Exit mobile version