Home ಟಾಪ್ ಸುದ್ದಿಗಳು DYFI ಕಾರ್ಯಕರ್ತ ಅಬ್ದುಲ್ ರಹ್ಮಾನ್ ಕೊಲೆ | ಯೂತ್ ಲೀಗ್ ನಾಯಕ ಸೇರಿ ಮೂವರ ವಿರುದ್ಧ...

DYFI ಕಾರ್ಯಕರ್ತ ಅಬ್ದುಲ್ ರಹ್ಮಾನ್ ಕೊಲೆ | ಯೂತ್ ಲೀಗ್ ನಾಯಕ ಸೇರಿ ಮೂವರ ವಿರುದ್ಧ ಕೇಸ್ ದಾಖಲು

ಕಾಸರಗೋಡು : ಡಿವೈಎಫ್ ಐ ಕಾರ್ಯಕರ್ತ ಅಬ್ದುಲ್ ರಹ್ಮಾನ್ (30) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಯೂತ್ ಲೀಗ್ ನಾಯಕ ಇರ್ಷಾದ್ ಸೇರಿದಂತೆ ಮೂವರ ವಿರುದ್ಧ ಕಾಂಞಗಾಡ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ರಹ್ಮಾನ್ ಅವರನ್ನು ನಿನ್ನೆ ರಾತ್ರಿ ಮನೆಗೆ ತೆರಳುವ ವೇಳೆ ತಂಡವೊಂದು ಹತ್ಯೆ ಮಾಡಿತ್ತು.

ರಹ್ಮಾನ್ ಹತ್ಯೆ ಖಂಡಿಸಿ ಕಾಂಞಗಾಡ್ ಮುನ್ಸಿಪಾಲಿಟಿ ವ್ಯಾಪ್ತಿಯಲ್ಲಿ ಇಂದು ಹರತಾಳ ನಡೆಯುತ್ತಿದೆ. ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಮುಸ್ಲಿಂ ಲೀಗ್ ಮತ್ತು ಡಿವೈಎಫ್ ಐ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಈ ಕೊಲೆ ನಡೆದಿದೆ ಎಂದು ಸಿಪಿಎಂ ಆಪಾದಿಸಿದೆ.

ಇದೀಗ ಮುಸ್ಲಿಂ ಲೀಗ್ ನ ಯುವ ಘಟಕದ ನಾಯಕ ಇರ್ಷಾದ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ದಾಳಿಯ ವೇಳೆ ಇರ್ಷಾದ್ ಎಂಬಾತ ಕೂಡ ಗಾಯಗೊಂಡಿದ್ದು ಆತನನ್ನು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎನ್ನಲಾಗಿದೆ.  

Join Whatsapp
Exit mobile version