ಹರಾರೆ: ಕ್ರಿಕೆಟ್ ಶಿಶು ಎಂಬ ಹಣೆಪಟ್ಟಿಯಿಂದ ಇನ್ನೂ ಹೊರಬಾರದ ಜಿಂಬಾಬ್ವೆ, ಬಾಂಗ್ಲಾದೇಶ ತಂಡವನ್ನು ಟಿ20 ಮತ್ತು ಏಕದಿನ ಸರಣಿಗಳಲ್ಲಿ ಸೋಲಿಸುವ ಮೂಲಕ ದಾಖಲೆ ನಿರ್ಮಿಸಿದೆ. ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ 105 ರನ್‌ಗಳ ಅಂತರದಲ್ಲಿ ಬಾಂಗ್ಲಾದೇಶ, ಆತಿಥೇಯ ಜಿಂಬಾಬ್ವೆ ತಂಡವನ್ನು ಮಣಿಸಿತು. ಈ ಸೋಲಿನ ಹೊರತಾಗಿಯೂ 2-1 ಅಂತರದಲ್ಲಿ ಸರಣಿಯನ್ನು ಜಿಂಬಾಬ್ವೆ ತನ್ನದಾಗಿಸಿಕೊಂಡಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 256 ರನ್ ಕಲೆಹಾಕಿತ್ತು. ಆದರೆ ಸಾಮಾನ್ಯ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಜಿಂಬಾಬ್ವೆ 32.2 ಓವರ್‌ಗಳಲ್ಲಿ 151 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಆ ಮೂಲಕ ವೈಟ್‌ವಾಷ್ ಮುಖಭಂಗದಿಂದ ತಪ್ಪಿಸಿಕೊಂಡಿತು.

ಆರು ಮಂದಿ ಬ್ಯಾಟ್ಸ್‌ಮನ್ ಶೂನ್ಯ ಸಂಪಾದನೆ !
ಇನ್ನು ಈ ಪಂದ್ಯದಲ್ಲಿ ಬಾಂಗ್ಲಾದೇಶದ ನಾಲ್ವರು ಬ್ಯಾಟ್ಸ್‌ಮನ್‌ಗಳು ಖಾತೆ ತರೆಯುವ ಮುನ್ನವೇ ವಿಕೆಟ್ ಒಪ್ಪಿಸಿದ್ದು ವಿಶೇಷವಾಗಿತ್ತು. ನಜ್ಮುಲ್ ಹುಸೈನ್, ಮುಷ್ಫಿಖರ್ ರಹೀಮ್, ಹಸನ್ ಮಹ್‌ಮೂದ್ ಹಾಗೂ ಮುಸ್ತಫಿಝುರ್ ರೆಹಮಾನ್ ಡಕ್ ಔಟ್ ಆದರೆ, ಎಬಾದತ್ ಹೊಸೈನ್ ಯಾವುದೇ ರನ್ ಕಲೆಹಾಕದೇ ಅಜೇಯರಾಗಿ ಉಳಿದರು. ಮತ್ತೊಂದೆಡೆ ಜಿಂಬಾಬ್ವೆ ತಂಡದ ಆರಂಭಿಕ ತಕುಡ್ಜ್ವಾನಾಶೆ ಕೈತಾನೋ ಮತ್ತು ನಾಯಕ ಶಿಖಂಧರ್ ರಾಜಾ ಕೂಡ ಡಕ್ ಔಟ್ ಆದರು. ಈ ಮೂಲಕ ಈ ಪಂದ್ಯದಲ್ಲಿ ಒಟ್ಟು ಆರು ಆಟಗಾರರು ಶೂನ್ಯ ಸುತ್ತಿದ್ದಾರೆ.