ಮಾರ್ಚ್ 1, 2020 ರ ನಂತರ ಪ್ರವಾಸಿ ವೀಸಾ ಅವಧಿ ಮುಗಿದ ಅನಿವಾಸಿಗಳು ಯಾವುದೇ ದಂಡ ವಿಧಿಸದೆ ತಮ್ಮ ದೇಶಗಳಿಗೆ ಮರಳಲು ದುಬೈ ಪ್ರಾಧಿಕಾರ ವಿಧಿಸಿದ್ದ ಒಂದು ತಿಂಗಳ ಕಾಲಾವಧಿಗೆ ಸೆಪ್ಟಂಬರ್ 7ರಿಂದ ಕೇವಲ 4 ದಿನಗಳ ಕಾಲಾವಕಾಶ ಬಾಕಿಯುಳಿದಿದೆ. ಈ ಕುರಿತು ಅಧಿಕೃತ ಹೇಳಿಕೆ ನೀಡಿದ್ದ ಸಂಯುಕ್ತ ರಾಜ್ಯಗಳ ಗುರುತು ಮತ್ತು ಪೌರತ್ವದ ಪ್ರಾಧಿಕಾರ (ICA), ಕಳೆದ ಆಗಸ್ಟ್ 11ರಂದು ಒಂದು ತಿಂಗಳ ಕಾಲಾವಧಿ ನಿಗದಿ ಮಾಡಿತ್ತು. ಅದು ಸಪ್ಟಂಬರ್ 11ಕ್ಕೆ ಮುಗಿಯಲಿದೆ.
ಕೊರೋನಾ ಸಾಂಕ್ರಾಮಿಕದಿಂದಾಗಿ ತಮ್ಮ ತಮ್ಮ ದೇಶಗಳಿಗೆ ಮರಳಲು ಸಾಧ್ಯವಾಗದೆ ದುಬೈಯಲ್ಲಿ ಬಾಕಿಯಾಗಿರುವ ಎಲ್ಲಾ ವಿದೇಶಿಗಳಿಗೆ ಐಸಿಎ ಪ್ರಾಧಿಕಾರ ಯಾವುದೇ ದಂಡ ಪಾವತಿಸದೆ ಮರಳಲು ಸಪ್ಟಂಬರ್ 11ಕ್ಕೆ ಅಂತಿಮ ದಿನದ ಗಡುವು ನೀಡಿತ್ತು. ಒಂದೋ ಪ್ರವಾಸಿಗರು ತಮ್ಮ ವೀಸಾವನ್ನು ನವೀಕರಿಸಬೇಕು ಅಥವಾ ಇನ್ನುಳಿದಿರುವ ನಾಲ್ಕು ದಿನಗಳ ಅವಧಿಯೊಳಗಡೆ ದುಬೈಯನ್ನು ತೊರೆಯಬೇಕು ಇಲ್ಲವೇ ದಂಡ ಪಾವತಿಸಲು ತಯಾರಿರಬೇಕಾಗುತ್ತದೆ.
ಕೊರೋನಾ ಸಾಂಕ್ರಾಮಿಕ ಜಗತ್ತಿನಾದ್ಯಂತ ವ್ಯಾಪಕವಾಗಿದ್ದ ಸಂದರ್ಭದಲ್ಲಿ ಯುಎಇ ಆಡಳಿತ, ಅವಧಿ ಮೀರಿದ ವಿಸಿಟ್ ವೀಸಾದವರ ದುಬೈಯಲ್ಲಿರುವ ಕಾಲಾವಧಿಯನ್ನು 2020ರ ಡಿಸಂಬರ್ ವರೆಗೆ ವಿಸ್ತರಿಸಿತ್ತು. ಆದರೆ ಕಳೆದ ಜುಲೈಯಲ್ಲಿ ಆ ತೀರ್ಮಾವನ್ನು ರದ್ದುಪಡಿಸಿತ್ತು. ಆಗಸ್ಟ್ ನಲ್ಲಿ ಈ ಕುರಿತು ಮತ್ತೊಂದು ಆದೇಶ ಬಿಡುಗಡೆಗೊಳಿಸಿದ್ದ ಆಡಳಿತ, ಆಗಸ್ಟ್ 11ರಿಂದ ವೀಸಾ ಮುಗಿದವರಿಗಾಗಿ ಒಂದು ತಿಂಗಳ ಕಾಲಾವಕಾಶ ನೀಡಲು ತೀರ್ಮಾನಿಸಿಸಲಾಗಿತ್ತು