ರಸ್ತೆ ಅಪಘಾತದ ಗಾಯಾಳುವಿಗೆ 1.25 ಕೋಟಿ ಪರಿಹಾರ ಒದಗಿಸಿದ ದುಬೈ ನ್ಯಾಯಾಲಯ

Prasthutha|

ದುಬೈ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅನಿವಾಸಿ ಭಾರತೀಯನಿಗೆ ದುಬೈ ನ್ಯಾಯಾಲಯವು ಶನಿವಾರ 6 ಲಕ್ಷ ದಿರ್ಹಂ (1.25 ಕೋಟಿ ರುಪಾಯಿ) ಪರಿಹಾರ ಘೋಷಿಸಿದೆಯೆಂದು ಗಾಯಾಳು ಪರ ವಕೀಲರು ತಿಳಿಸಿದ್ದಾರೆ. ಅವರು ಸತತ ಒಂದು ವರ್ಷ ಕಾಲ ದುಬೈ ನ್ಯಾಯಾಲಯದಲ್ಲಿ ಈ ಸಂಬಂಧ ಕಾನೂನು ಹೋರಾಟ ನಡೆಸಿದ್ದರು.

- Advertisement -

ಕೇರಳದ ಆಲಪ್ಪುಝಂ ಮೂಲದ ರಿಜಾಝ್ ಮಹಮ್ಮದ್ ಕುಂಞಿ ಅವರ ಕಾರು ಜನವರಿ 12, 2020 ರಂದು ಅಲ್ ಐನ್ – ಅಬುಧಾಬಿ ಹೆದ್ದಾರಿಯಲ್ಲಿ ಅಪಘಾತಕ್ಕೀಡಾಗಿತ್ತು.

ಈ ದುರ್ಘಟನೆಗೆ ಇನ್ನೊಂದು ಕಾರಿನ ಚಾಲಕನ ನಿರ್ಲಕ್ಷವೇ ಕಾರಣವೆಂದು ಮನಗಂಡ ದುಬೈ ಟ್ರಾಫಿಕ್ ಪೊಲೀಸರು ಆತನಿಗೆ 5000 ದಿರ್ಹಂ (1 ಲಕ್ಷ ರುಪಾಯಿ) ದಂಡ ವಿಧಿಸಿದ್ದರು. ಅಪಘಾತದ ಹಿನ್ನೆಲೆಯಲ್ಲಿ ಗಂಭೀರವಾಗಿ ಗಾಯಗೊಂಡ ರಿಜಾಝ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅದೇ ರೀತಿ ಗಾಯಾಳುವಾದ ಕಾರಣ ಅಪಘಾತ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ದಾವೆ ಹೂಡಲಾಯಿತೆಂದು ವಕೀಲರಾದ ಪಪ್ಪಿನ್ಸೆರಿ ತಿಳಿಸಿದರು.

- Advertisement -

ಗಾಯಾಳು ಪರ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ದುಬೈ ನ್ಯಾಯಾಲಯವು ವಿಮಾ ಕಂಪೆನಿಯ ಆಕ್ಷೇಪಣಾ ಅರ್ಜಿಯನ್ನು ತಿರಸ್ಕರಿಸಿ ಕೇರಳದ ಮೂಲದ ರಿಜಾಝ್ ಅವರಿಗೆ ಬೃಹತ್ ಮೊತ್ತದ ಪರಿಹಾರವನ್ನು ನೀಡಿದೆ ಎಂದು ಪಪ್ಪಿನ್ಸೆರಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

Join Whatsapp