Home ಕರಾವಳಿ ದುಬೈ, ಕುವೈಟ್’ನಲ್ಲಿ ಉದ್ಯೋಗ: 800 ಮಂದಿಯಿಂದ ಅರ್ಜಿ ಆಹ್ವಾನ

ದುಬೈ, ಕುವೈಟ್’ನಲ್ಲಿ ಉದ್ಯೋಗ: 800 ಮಂದಿಯಿಂದ ಅರ್ಜಿ ಆಹ್ವಾನ

ಮಂಗಳೂರು: ದುಬೈ ಮತ್ತು ಕುವೈಟ್ ದೇಶಗಳಲ್ಲಿ ಮನೆ ಕೆಲಸ ನಿರ್ವಹಿಸಲು ಒಟ್ಟು 800ಜನ ಮಹಿಳಾ ಕೆಲಸಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು 30-45 ವಯೋಮಿತಿಯಲ್ಲಿರಬೇಕು. ಪಾಸ್ ಪೋರ್ಟ್ ಹೊಂದಿರಬೇಕು. ಟಿಕೆಟ್ ಮತ್ತು ವೀಸಾ ವೆಚ್ಚವನ್ನು ವಿದೇಶಿ ನಿಯೋಜಕರು ಭರಿಸಲಿದ್ದು, ಎರಡು ವರ್ಷಗಳ ಸೇವಾವಧಿ ಇರುತ್ತದೆ. ಆಸಕ್ತ ಅಭ್ಯರ್ಥಿಗಳು ಉರ್ವ ಮಾರುಕಟ್ಟೆಯ ಕಟ್ಟಡದ ಎರಡನೇ ಮಹಡಿಯಲ್ಲಿರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಸಂಯೋಜಕರ ಮೊ.ಸಂ: 9110248485 ಅನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version