August 5, 2021

ಮುಂದಿನ 10 ದಿನಗಳ ಕಾಲ ಮಂಗಳೂರಿನಿಂದ ದುಬೈಗೆ ಯಾವುದೇ ವಿಮಾನ ನಿಗದಿಯಾಗಿಲ್ಲ

ದುಬೈ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಮುಂದಿನ 10 ದಿನಗಳ ವರೆಗೆ ಯಾವುದೇ ನೇರ ವಿಮಾನಗಳು ನಿಗದಿಯಾಗಿಲ್ಲವೆಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯುಎಇ ಸರ್ಕಾರದ ಆದೇಶದನ್ವಯ ಪ್ರಯಾಣಿಕರ ತ್ವರಿತ ಪಿಸಿಆರ್ ಪರೀಕ್ಷೆ ಕಡ್ಡಾಯದ ಹಿನ್ನೆಲೆಯಲ್ಲಿ ವಿಮಾನವು ನಿರ್ಗಮನದ ನಾಲ್ಕು ಘಂಟೆ ಮುಂಚೆ ಈ ಪ್ರಕ್ರಿಯೆ ಮಂಗಳೂರು ವಿಮಾನದಲ್ಲಿ ಸಾಧ್ಯವಿಲ್ಲದಿರುವುದರಿಂದ ವಿಮಾನಗಳನ್ನು ನಿಗದಿಗೊಳಿಸಿಲ್ಲವೆಂದು ಹೇಳಲಾಗುತ್ತಿದೆ.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕರ್ನಾಟಕದ ಕರಾವಳಿ ನಗರವಾದ ಮಂಗಳೂರು ಮತ್ತು ನೆರೆಯ ರಾಜ್ಯವಾದ ಕೇರಳದ ಕಾಸರಗೋಡಿನ ಜನತೆ ಯುಎಇ ಮತ್ತು ಕೊಲ್ಲಿ ರಾಷ್ಟ್ರಗಳಿಗೆ ಪ್ರಯಾಣಿಸಲುಸೇವೆಯನ್ನು ಒದಗಿಸುತ್ತಾ ಬಂದಿದೆ. ಈ ವಿಮಾನ ನಿಲ್ದಾಣವು 2018 ಮತ್ತು 2019 ರ ನಡುವೆ 2.24 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದೆ. ಅದೇ ರೀತಿ ಇದು ಭಾರತದ 50 ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ.

ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ನೈಜೀರಿಯಾ ಮತ್ತು ಉಗಾಂಡಾದಿಂದ ಸಂಪೂರ್ಣ ಲಸಿಕೆ ಹಾಕಿದ ಯುಎಇ ರೆಸಿಡೆನ್ಸಿ ವೀಸಾ ಹೊಂದಿರುವವರು ಯುಎಇ ಗೆ ಮರಳಬಹುದು ಎಂದು ಯುಎಇ ಸರ್ಕಾರ ಮಂಗಳವಾರ ಘೋಷಿಸಿತ್ತು. ಗುರುವಾರ ಭಾರತದಿಂದ ಹಲವಾರು ಪ್ರಯಾಣಿಕರನ್ನು ಹೊತ್ತ ಮೊದಲ ವಿಮಾನ ಯುಎಇಯಲ್ಲಿ ಬಂದಿಳಿದಿದೆ. ಯುಎಇ ಅಧಿಕೃತವಾಗಿ ಅನುಮೋದಿಸಿದ ಲಸಿಕೆ ಹಾಕಿದ ವಾಕ್ಸಿನ್ ಪ್ರಮಾಣಪತ್ರಗಳೊಂದಿಗೆ ಯುಎಇ ರೆಸಿಡೆನ್ಸಿ ವೀಸಾ ಹೊಂದಿರುವ ಎಲ್ಲಾ ಪ್ರಯಾಣಿಕರಿಗೆ ಯುಎಇ ಗೆ ಮರಳಲು ಅನುಮತಿ ನೀಡಿತ್ತು.

ಈ ಮಧ್ಯೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪಿಸಿಆರ್ ತ್ವರಿತ ಪರೀಕ್ಷೆಗಳಿಗೆ ಅನಾನುಕೂಲತೆಯ ನೆಪವೊಡ್ಡಿ ಮುಂದಿನ 10 ದಿನಗಳ ವರೆಗೆ ನೇರ ವಿಮಾನಗಳನ್ನು ನಿಗದಿಗೊಳಿಸಿಲ್ಲ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!