Home ಗಲ್ಫ್ ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿಗೆ ₹11 ಕೋಟಿ ಪರಿಹಾರ ನೀಡಲು ದುಬೈ ನ್ಯಾಯಾಲಯ...

ಬಸ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿಗೆ ₹11 ಕೋಟಿ ಪರಿಹಾರ ನೀಡಲು ದುಬೈ ನ್ಯಾಯಾಲಯ ಆದೇಶ

ದುಬೈ: 2019ರಲ್ಲಿ ದುಬೈನಲ್ಲಿ ನಡೆದ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ವಿದ್ಯಾರ್ಥಿಗೆ 11 ಕೋಟಿ ರೂ. (50 ಲಕ್ಷ ದಿರ್ಹಂ) ಪರಿಹಾರ ನೀಡಲು ದುಬೈ ಕೋರ್ಟ್ ಆದೇಶಿಸಿದೆ.

ಒಮಾನ್‌ನಿಂದ ದುಬೈಗೆ ವಿವಿಧ ದೇಶಗಳ 31 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಬಸ್ ರಾಶಿದಿಯಾದಲ್ಲಿ ಭೀಕರವಾಗಿ ಅಪಘಾತಕ್ಕೀಡಾಗಿತ್ತು.

ಈ ಅಪಘಾತದಲ್ಲಿ 17 ಪ್ರಯಾಣಿಕರು ಸಾವನ್ನಪ್ಪಿದ್ದರು.
ಹೈದರಾಬಾದ್ ಮೂಲದ, ಯುಎಇ ರಾಸಲ್ ಖೈಮಾದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದ ಮೊಹಮ್ಮದ್ ಬೇಗ್ ಮಿರ್ಜಾ ಎಂಬ ಯುವಕ ಗಂಭೀರ ಗಾಯಗೊಂಡಿದ್ದು, ವಿದ್ಯಾರ್ಥಿಗೆ 11 ಕೋಟಿ ರೂ. ಪರಿಹಾರ ನೀಡಲು ನ್ಯಾಯಾಲಯ ಆದೇಶಿಸಿದೆ.

ಮಿರ್ಜಾ ಅವರ ಮೆದುಳಿಗೆ ಶೇಕಡಾ 50 ರಷ್ಟು ಶಾಶ್ವತ ಹಾನಿಯಾಗಿದೆ ಎಂದು ನ್ಯಾಯಾಲಯವು ಪರಿಹಾರವನ್ನು ಪಾವತಿಸುವಂತೆ ವಿಮಾ ಕಂಪನಿಗೆ ಸೂಚಿಸಿದೆ.

ಯುಎಇಯ ಇತಿಹಾಸದಲ್ಲೇ ಭಾರತೀಯನೊಬ್ಬ ಪಡೆಯುತ್ತಿರುವ ಅತಿ ದೊಡ್ಡ ವಾಹನ ಅಪಘಾತ ಪರಿಹಾರ ಇದಾಗಿದೆ ಎಂದು ಹೇಳಲಾಗುತ್ತಿದೆ.

Join Whatsapp
Exit mobile version