Home ಟಾಪ್ ಸುದ್ದಿಗಳು ದುಬೈಯಿಂದ ಬರುತ್ತಿದ್ದ ವಿಮಾನ ಹೈಜಾಕ್ ಆಗಿದೆ ಎಂದು ಸುಳ್ಳು ಟ್ವೀಟ್: ಪ್ರಯಾಣಿಕನ ಬಂಧನ

ದುಬೈಯಿಂದ ಬರುತ್ತಿದ್ದ ವಿಮಾನ ಹೈಜಾಕ್ ಆಗಿದೆ ಎಂದು ಸುಳ್ಳು ಟ್ವೀಟ್: ಪ್ರಯಾಣಿಕನ ಬಂಧನ

ನವದೆಹಲಿ: ದುಬೈಯಿಂದ ಜೈಪುರಕ್ಕೆ ಬರುತ್ತಿದ್ದ ವಿಮಾನ ಹೈಜಾಕ್ (ಅಪಹರಣ) ಆಗಿದೆ ಎಂದು ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದು, ಆದರೆ ಅಪಹರಣ ಸುದ್ದಿ ಸುಳ್ಳು ಎಂದು ಪೊಲೀಸರು ಪ್ರಯಾಣಿಕನನ್ನು ಬಂಧಿಸಿದ್ದಾರೆ.


ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, “ರಾಜಸ್ಥಾನದ ನಾಗೌರ್ ನಿವಾಸಿ ಮೋತಿ ಸಿಂಗ್ ರಾಥೋಡ್(29) ಎಂಬವರು ದುಬೈ-ಜೈಪುರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಹವಾಮಾನ ವೈಪರೀತ್ಯದಿಂದಾಗಿ ವಿಮಾನವು ಇಂದಿರಾಗಾಂಧಿ ಏರ್ಪೋರ್ಟ್ ಗೆ ಬೆಳಗ್ಗೆ 9.45ಕ್ಕೆ ಲ್ಯಾಂಡ್ ಆಗಿತ್ತು. ಈ ಮಧ್ಯೆ ರಾಥೋಡ್ ವಿಮಾನ ಹೈಜಾಕ್ ಆಗಿದೆ ಎಂದು ಟ್ವೀಟ್ ಮಾಡಿದ್ದರು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ತಪಾಸಣೆ ನಡೆಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಬಳಿಕ ವಿಮಾನವನ್ನು ಅಗತ್ಯ ತಪಾಸಣೆ ನಡೆಸಿ, ಆರೋಪಿಯನ್ನು ಬಂಧಿಸಲಾಯಿತು. ನಂತರ ಮಧ್ಯಾಹ್ನ 1.40 ಕ್ಕೆ ವಿಮಾನ ಟೇಕ್ಆಫ್ ಮಾಡಲು ಅನುಮತಿ ನೀಡಲಾಯಿತು ಎಂದು ತಿಳಿಸಿದ್ದಾರೆ.

Join Whatsapp
Exit mobile version