ದಸಂಸ (ಭೀಮವಾದ), RPI ವತಿಯಿಂದ ಸಂವಿಧಾನ ಅರ್ಪಣಾ ದಿನಾಚರಣೆ | ಪ್ರಬಂಧ ಸ್ಪರ್ಧೆ

Prasthutha|

ಉಡುಪಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಮತ್ತು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ ಪಿಐ) ಉಡುಪಿ ಜಿಲ್ಲಾ ಶಾಖೆಯ ವತಿಯಿಂದ 71ನೇ ಸಂವಿಧಾನ ಅರ್ಪಣಾ ದಿನಾಚರಣೆ ನಡೆಯಿತು. ಉಡುಪಿಯ ಬೈರಂಪಳ್ಳಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂವಿಧಾನ ಅರ್ಪಣಾ ದಿನಾಚರಣೆಯ ಸಲುವಾಗಿ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಲಾಯಿತು. ಸಂವಿಧಾನದ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳ ವಿಷಯಗಳ ಬಗ್ಗೆ ಪ್ರಬಂಧ ಬರೆಯಲಾಯಿತು. ಸಂವಿಧಾನ ಭಿತ್ತಿಚಿತ್ರ, ಬಾಬಾ ಸಾಹೇಬರ ಚಿತ್ರ ರಚನೆ ಸ್ಪರ್ಧೆಯೂ ನಡೆಯಿತು.

- Advertisement -

ಸ್ಪರ್ಧಾ ವಿಜೇತರಿಗೆ ಬಾಬಾ ಸಾಹೇಬರ ಬರಹ ಮತ್ತು ಭಾಷಣಗಳು ಪುಸ್ತಕ ಹಾಗೂ ಪ್ರಶಸ್ತಿ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು. ಬಂದಿರುವ ಎಲ್ಲರಿಗೂ ಬಾಬಾ ಸಾಹೇಬರ ಬರಹ ಮತ್ತು ಭಾಷಣಗಳ ಪುಸ್ತಕ ವಿತರಿಸಲಾಯಿತು.

- Advertisement -