Home ಟಾಪ್ ಸುದ್ದಿಗಳು ಡ್ರಗ್ಸ್ ಸೇವನೆ ಪ್ರಕರಣ: ಶಕ್ತಿಕಪೂರ್ ಪುತ್ರ ಸಿದ್ದಾಂತ್ ಜಾಮೀನಿನ ಮೇಲೆ ಬಿಡುಗಡೆ

ಡ್ರಗ್ಸ್ ಸೇವನೆ ಪ್ರಕರಣ: ಶಕ್ತಿಕಪೂರ್ ಪುತ್ರ ಸಿದ್ದಾಂತ್ ಜಾಮೀನಿನ ಮೇಲೆ ಬಿಡುಗಡೆ

ಬೆಂಗಳೂರು: ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿದ ಹಿರಿಯ ನಟ ಶಕ್ತಿ ಕಪೂರ್ ಅವರ ಪುತ್ರ ಸಿದ್ದಾಂತ್ ಕಪೂರ್ ಗೆ ಜಾಮೀನು ದೊರೆತಿದೆ.

ನಗರದ ಎಂಜಿ ರಸ್ತೆಯಲ್ಲಿನ ಐಷಾರಾಮಿ ಪಾರ್ಕ್ ಹೋಟೆಲ್ ವೊಂದರ ಮೇಲೆ ದಾಳಿ ನಡೆಸಿದ್ದ ಪೊಲೀಸರು ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿದ್ದ ಸಿದ್ಧಾಂತ್ ಸೇರಿದಂತೆ ಐವರನ್ನು ಬಂಧಿಸಿ ಹಲಸೂರು ಠಾಣೆಗೆ ಕರೆದೊಯ್ಯಲಾಗಿತ್ತು.

ಆರೋಪಿಗಳ ಡ್ರಗ್ಸ್ ಪರೀಕ್ಷೆ ಪಾಸಿಟಿವ್ ಬಂದಿತ್ತು. ಈ ಪ್ರಕರಣದಲ್ಲಿ ಈಗ ಐವರಿಗೂ ಜಾಮೀನು ನೀಡಲಾಗಿದೆ.

ಈ ಪ್ರಕರಣದಲ್ಲಿ ಸಿದ್ದಾಂತ್ ಕಪೂರ್ ಹಾಗೂ ನಾಲ್ವರನ್ನು ಠಾಣೆಯ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಬೆಂಗಳೂರು ಪೂರ್ವ ಡಿಸಿಪಿ ಭೀಮಾಶಂಕರ್ ಗುಳೇದ್ ಸ್ಪಷ್ಟಪಡಿಸಿದ್ದಾರೆ.

ಡ್ರಗ್ ಪೆಡ್ಲಿಂಗ್ ಮಾಡದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆ ವಿಚಾರಣೆಗೆ ಕರೆದಾಗ ಠಾಣೆಗೆ ಬರಬೇಕಾಗುತ್ತದೆ ಎನ್ನುವ ಷರತ್ತು ವಿಧಿಸಿ ಬಿಡುಗಡೆ ಮಾಡಲಾಗಿದೆ ಎಂದರು.

ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿದ ಬಾಲಿವುಡ್ ನಟ ಸಿದ್ಧಾಂತ್ ಕಪೂರ್ ಜೊತೆಗೆ ಅಕಿಲ್ ಸೋನಿ, ಹರ್ಜೋತ್ ಸಿಂಗ್, ಅಕಿಲ್ , ಹನಿಯನ್ನು ಹಲಸೂರು ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

Join Whatsapp
Exit mobile version