Home ಟಾಪ್ ಸುದ್ದಿಗಳು ಚಿಕನ್ ಪೀಸ್ ನಲ್ಲಿ ಗಾಂಜಾ ಸರಬರಾಜು; ವ್ಯಕ್ತಿಯ ಬಂಧನ

ಚಿಕನ್ ಪೀಸ್ ನಲ್ಲಿ ಗಾಂಜಾ ಸರಬರಾಜು; ವ್ಯಕ್ತಿಯ ಬಂಧನ

ವಿಜಯಪುರ: ಚಿಕನ್ ಪೀಸ್ ನಲ್ಲಿ ಗಾಂಜಾ ಇರಿಸಿ ಕೈದಿಗೆ ಸರಬರಾಜು ಮಾಡುತ್ತಿದ್ದ ವ್ಯಕ್ತಿಯನ್ನು ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದ ಜೈಲು ಸಿಬ್ಬಂದಿಗಳು ಬಂಧಿಸಿದ್ದಾರೆ.

ಪ್ರಜ್ವಲ್ ಲಕ್ಷ್ಮಣ ಮಾಬರುಖಾನೆ ಎಂಬಾತ ಜೈಲಿನಲ್ಲಿರುವ ಕೈದಿಗಳಿಗೆ ಗಾಂಜಾ ಸಾಗಿಸುತ್ತಿದ್ದ. ಅದಕ್ಕಾಗಿ ಆತ ಚಿಕನ್ ಪೀಸ್ ನಲ್ಲಿ ಗಾಂಜಾ ತುಂಬಿದ ಪ್ಲಾಸ್ಟಿಕ್ ಚೀಟಿ ಇರಿಸಿ ಅಚ್ಚುಕಟ್ಟಾಗಿ ಹೊಲಿಗೆ ಹಾಕಿ ಸರಬರಾಜು ಮಾಡುತ್ತಿದ್ದ  ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಿರುವ ಜೈಲು ಸಿಬ್ಬಂದಿ ದೊಡ್ಡ ದೊಡ್ಡ ಚಿಕನ್ ಪೀಸ್ ನಲ್ಲಿದ್ದ 2 ಗ್ರಾಂನಷ್ಟು ಗಾಂಜಾ ತುಂಬಿದ ಒಟ್ಟು 18 ಗಾಂಜಾ ಚೀಟಿ ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಆದರ್ಶನಗರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version