ಹಝಾರಿಬಾಗ್ : ಬ್ರೌನ್ ಶುಗರ್ ಕಳ್ಳ ಸಾಗಾಟ ಜಾಲದಲ್ಲಿ ಓರ್ವ ಬಿಜೆಪಿ ಯುವ ಘಟಕದ ಮುಖಂಡ ಸೇರಿ ಒಂಬತ್ತು ಮಂದಿಯನ್ನು ಜಾರ್ಖಂಡ್ ನ ಛಾತ್ರ ಜಿಲ್ಲೆಯ ಪೊಲೀಸರು ಬಂಧಿಲ್ಲಿ ಸಿದ್ದಾರೆ. ದ್ರಗ್ಸ್ ದಂಧೆಯಲ್ಲಿ ಬಂಧಿತರಾದವರಿಂದ 296 ಗ್ರಾಮ್ಸ್ ಬ್ರೌನ್ ಶುಗರ್, ಒಂದು ಕಾರು, ಒಂದು ಬೈಕ್, 8 ಮೊಬೈಲ್ 7.74 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಛಾತ್ರ ಪೊಲೀಸ್ ವರಿಷ್ಠಾಧಿಕಾರಿ ರಿಷವ್ ಕುಮಾರ್ ಝಾ ಅವರು ರಚಿಸಿದ್ದ ತಂಡ ಕಾರ್ಯಾಚರಣೆ ನಡೆಸಿ, ಈ ಜಾಲವನ್ನು ಬೇಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಕೂಡ ಇದ್ದಾನೆ.
ಬಿಜೆಪಿ ಮುಖಂಡ ಹಿಮಾಂಶು ಕುಮಾರ್, ಅಮಿತ್ ಗುಪ್ತಾ, ಧೀರಜ್ ಕುಮಾರ್, ಅನುರಾಗ್ ಕುಮಾರ್, ಚಂದನ್ ಕುಮಾರ್ ಸೇರಿದಂತೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಸಿನಿಮೀಯ ಶೈಲಿಯಲ್ಲಿ ಈ ಡ್ರಗ್ಸ್ ದಂಧೆಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.