ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 2 ಲಕ್ಷ ರೂ.ಬೆಲೆಬಾಳುವ ವಸ್ತುವನ್ನು ಪ್ರಯಾಣಿಕನಿಗೆ ಹಿಂದಿರುಗಿಸಿದ ಚಾಲಕರು: ವ್ಯಾಪಕ ಶ್ಲಾಘನೆ

Prasthutha|

ಉಡುಪಿ: ಪ್ರಯಾಣಿಕರೊಬ್ಬರು 2 ರೂ. ಲಕ್ಷ ಬೆಲೆಬಾಳುವ ಮೊಬೈಲ್, ನಗದು ಮತ್ತು ಚಿನ್ನಾಭರಣವನ್ನೊಳಗೊಂಡ ಬ್ಯಾಗ್ ಅನ್ನು  ಬಸ್ಸಿನಲ್ಲಿ ಬಿಟ್ಟುಹೋಗಿದ್ದನ್ನು ಗಮನಿಸಿದ ಚಾಲಕ ಪ್ರಯಾಣಿಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

- Advertisement -

 ಕುಂದಾಪುರ ಬಸ್ ಘಟಕದ ಬಸ್ ಚಾಲಕ ಸಿ.ಎಂ ಲಿಂಗೇಶ್ ಮತ್ತು ನಿರ್ವಾಹಕ ಎಚ್.ಕೆ.ರಾಜು ಅವರ ಈ ಪ್ರಾಮಾಣಿಕತೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

 ಬೆಂಗಳೂರು-ಕುಂದಾಪುರ ಬಸ್ ನಲ್ಲಿ ಹೊರಟ್ಟಿದ್ದ ಪ್ರಯಾಣಿಕರೊಬ್ಬರು ಮೊಬೈಲ್, ನಗದು ಮತ್ತು ಚಿನ್ನಾಭರಣವನ್ನೊಳಗೊಂಡ ಒಂದು ಬ್ಯಾಗ್ ನ್ನು ಬಸ್ಸಿನಲ್ಲಿ ಬಿಟ್ಟು ಉಡುಪಿ ಬಸ್ ನಿಲ್ದಾಣದಲ್ಲಿ ಇಳಿದಿದ್ದರು. ಬಳಿಕ ಕುಂದಾಪುರ ಘಟಕದಲ್ಲಿ, ಚಾಲಕ ಸಿ.ಎಂ ಲಿಂಗೇಶ್ ಮತ್ತು ನಿರ್ವಾಹಕ ಎಚ್.ಕೆ.ರಾಜು ಬಸ್ಸಿನಲ್ಲಿರುವ ಬ್ಯಾಗ್ ನ್ನು ಗಮನಿಸಿ, ಪ್ರಯಾಣಿಕರಿಗೆ ದೂರವಾಣಿ ಮೂಲಕ ಕರೆಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಕುಂದಾಪುರ ಘಟಕ ವ್ಯವಸ್ಥಾಪಕರ ಸಮ್ಮುಖದಲ್ಲಿ ಪ್ರಯಾಣಿಕರಿಗೆ ತಲುಪಿಸಿದ್ದಾರೆ. ಇವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

- Advertisement -

ಬಸ್ ಚಾಲಕ ಮತ್ತು ನಿರ್ವಾಹಕರ ಈ ಕೆಲಸಕ್ಕೆ ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಕೂಡ ಶ್ಲಾಘಿಸಿದ್ದಾರೆ.

Join Whatsapp