ಅಬುಧಾಬಿ: ಬಿಗ್ ಟಿಕೆಟ್ ಡ್ರಾದಲ್ಲಿ 50 ಕೋಟಿ ಲಾಟರಿ ಗೆದ್ದ ಕೇರಳದ ಚಾಲಕ

Prasthutha|

ಅಬುಧಾಬಿ: ಕೇರಳ ಮೂಲದ ಅಬುದಾಬಿ ನಿವಾಸಿಯೊಬ್ಬರು ಬಿಗ್ ಟಿಕೆಟ್ ಸಾಪ್ತಾಹಿಕ ಡ್ರಾದಲ್ಲಿ 25 ಮಿಲಿಯನ್ ದಿರ್ಹಮ್ ( 50,63,66,900 ರೂ.) ಬಹುಮಾನವನ್ನು ಗೆದ್ದಿದ್ದಾರೆ.

- Advertisement -

ಬಿಗ್ ಟಿಕೆಟ್ ಡ್ರಾ ವಿಜೇತರಾದ ಹರಿದಾಸನ್ ಮೂತ್ತತ್ತಿಲ್ ವಸುನ್ನಿ ಮೂಲತಃ ಕೇರಳದ ಮಲಪ್ಪುರಂ ಜಿಲ್ಲೆಯವರು. ಕಳೆದ ಒಂದು ದಶಕದಿಂದ ಅಬುದಾಬಿ, ಅಲ್ ಐನ್ ಎಂಬಲ್ಲಿ ಮುಸ್ಸಾಫ ಇಂಡಸ್ಟ್ರಿಯಲ್ ಪ್ರದೇಶದ ಖಾಸಗಿ ಕಂಪೆನಿಯೊಂದರಲ್ಲಿ ಚಾಲಕರಾಗಿ ದುಡಿಯುತ್ತಿದ್ದಾರೆ.

ಹರಿದಾಸನ್ ಡಿಸೆಂಬರ್ 30 ರಂದು ಖರೀದಿಸಿದ ಟಿಕೆಟ್ ಸಂಖ್ಯೆ 232976 ಗೆ ಬಹುಮಾನ ಬಂದಿದೆ. ಅವರು ಒಟ್ಟು ಮೊತ್ತದಲ್ಲಿ ಸ್ಪಲ್ಪ ಹಣವನ್ನು ಇತರ ಹತ್ತು ಜನರೊಂದಿಗೆ ಹಂಚಿಕೊಳ್ಳಲಿದ್ದಾರೆ.

- Advertisement -

ಡಿಸೆಂಬರ್ 2021 ರಲ್ಲಿ ಬಿಗ್ ಟಿಕೆಟ್ ಕಂಪೆನಿ ಪ್ರತಿವಾರ 1 ಮಿಲಿಯನ್ ದಿರ್ಹಮ್ ( 2,06, 34, 490) ನೀಡಿತು. ಈ ಎಲ್ಲಾ ವಿಜೇತರು ಭಾರತೀಯ ಮೂಲದವರು ಎಂಬುದು ಗಮನಾರ್ಹ. ವೆಕಾರ್ ಜಾಫ್ರಿ, ಬ್ರಿಜೇಶ್, ಬೋಸ್, ರಫೀಕ್ ಮೊಹಮದ್ ಅಹ್ಮದ್, ಹರುಣ್ ಶೇಖ್ ವಿಜೇತರು.

Join Whatsapp