ಬಹರೇನ್ : ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಬಹ್ರೇನ್ ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಬಹ್ರೇನ್ ನಿಂದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಭಾರತೀಯ ನಿರ್ವಹಣೆಯ ಅಡಿಯಲ್ಲಿ ಬಹ್ರೇನ್‌ನಲ್ಲಿರುವ ಶಾಲೆಗಳಲ್ಲಿ ನಾಲ್ಕು ವರ್ಷದಿಂದ 18 ವರ್ಷದವರೆಗಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ನಮೂದುಗಳನ್ನು ಸಬ್ ಜೂನಿಯರ್, ಜೂನಿಯರ್ ಮತ್ತು ಸೀನಿಯರ್ ಎಂದು ವರ್ಗೀಕರಿಸಲಾಗುತ್ತದೆ. ಭಾಗವಹಿಸುವವರು (https://shortest.link/xNb) ಈ ಲಿಂಕ್‌ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಕಲಾಕೃತಿಯನ್ನು (isfbahrain@gmail.com) ಇಮೇಲ್ ಐಡಿಗೆ ಕಳುಹಿಸಬೇಕು ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.
ಭಾರತದ ರಾಯಭಾರ ಕಚೇರಿಯನ್ನು ಪ್ರತಿನಿಧಿಸುವ ಮೂರನೇ ಕಾರ್ಯದರ್ಶಿ ಶ್ರೀ ಇಹ್ಜಾಸ್ ಅಸ್ಲಂ ಅವರು 10 ದಿನಗಳ ಕಾಲ ನಡೆಯುವ ಆನ್‌ಲೈನ್ ಕಾರ್ಯಕ್ರಮವನ್ನು ವೆಬಿನಾರ್ ಮೂಲಕ ಆಯೋಜಿಸಲಾಗಿದ್ದು, 1 ನೇ ಆಗಸ್ಟ್ 2021 ರ ಭಾನುವಾರ ಕಾರ್ಯಕ್ರಮ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಉದ್ಘಾಟಿಸಿದರು.ಇಂಡಿಯನ್ ಸೋಶಿಯಲ್ ಫೋರಂ ಅಧ್ಯಕ್ಷ ಅಬ್ದುಲ್ ಜಾವದ್ ಪಾಷಾ ಅಧ್ಯಕ್ಷತೆಯಲ್ಲಿ ವೆಬಿನಾರ್ ಅನ್ನು ಉದ್ಘಾಟಿಸಲಾಯಿತು. ಐಸಿಆರ್ಎಫ್ ಅಧ್ಯಕ್ಷರಾದ ಶ್ರೀ ಅರುಲ್ ದಾಸ್, ಇಂಡಿಯನ್ ಕ್ಲಬ್ ಅಧ್ಯಕ್ಷರಾದ ಶ್ರೀ ಸ್ಟಾಲಿನ್ ಜೋಸೆಫ್, ISB ಅಧ್ಯಕ್ಷರಾದ ಶ್ರೀ ಪ್ರಿನ್ಸ್ ನಟರಾಜನ್ ಉಪಸ್ಥಿತರಿದ್ದರು. ವೆಬಿನಾರ್ ಕಾರ್ಯಕ್ರಮವನ್ನು ಇಂಡಿಯನ್ ಸೋಶಿಯಲ್ ಫೋರಂ ಪ್ರಧಾನ ಕಾರ್ಯದರ್ಶಿ ಯೂಸುಫ್ ಅಲಿ ಸ್ವಾಗತಿಸಿದರು ಮತ್ತು ಉಪಾಧ್ಯಕ್ಷ ರಶೀದ್ ಸೈಯದ್ ವಂದಿಸಿದರು.
ಹೆಚ್ಚಿನ ಮಾಹಿತಿಗಾಗಿ 33202833, 36185650, 34346583 ಗೆ ಸಂಪರ್ಕಿಸಲು ಕೋರಲಾಗಿದೆ.