Home ಟಾಪ್ ಸುದ್ದಿಗಳು ದ್ರೌಪದಿ ಮುರ್ಮು vs ಯಶವಂತ್ ಸಿನ್ಹಾ | ಹತ್ತು ಮುಖ್ಯಾಂಶಗಳು

ದ್ರೌಪದಿ ಮುರ್ಮು vs ಯಶವಂತ್ ಸಿನ್ಹಾ | ಹತ್ತು ಮುಖ್ಯಾಂಶಗಳು

►ಯಾರ ಬೆಂಬಲ ಯಾರಿಗೆ, ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಇದೀಗಾಗಲೇ ಮತದಾನ ನಡೆಯುತ್ತಲಿದ್ದು, ಜುಲೈ 21 ರಂದು ಮತ ಎಣಿಕೆ ನಡೆಯಲಿದೆ. ಜುಲೈ 25 ರಂದು ಹೊಸ ರಾಷ್ಟ್ರಪತಿಗಳು ಚುನಾವಣಾ ಆಯೋಗ ಘೋಷಿಸಿದ ವೇಳಾಪಟ್ಟಿಯ ಪ್ರಕಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಹೀಗಿರುವಾಗ ದ್ರೌಪದಿ ಮುರ್ಮು ಮತ್ತು ಯಶವಂತ್ ಸಿನ್ಹಾ ಕಣಕ್ಕಿಳಿದಿದ್ದು ಆ ಕುರಿತ ಹತ್ತು ಮುಖ್ಯಾಂಶಗಳು ಈ ರೀತಿಯಿವೆ.

1.            ಸಂಸತ್ತಿನ ಮಾನ್ಸೂನ್ ಅಧಿವೇಶನದ ಮೊದಲ ದಿನ ರಾಷ್ಟ್ರಪತಿ ಚುನಾವಣೆ ನಡೆದಿದೆ. 64 ವರ್ಷದ ದ್ರೌಪದಿ ಮುರ್ಮು ಅವರು 2017 ರ ರಾಷ್ಟ್ರಪತಿ ಚುನಾವಣೆಗೆ ಮೊದಲು ದೇಶದ ಅತ್ಯುನ್ನತ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿದ್ದರು, ಆ ಮೇಲೆ ಅಂದಿನ ಬಿಹಾರದ ರಾಜ್ಯಪಾಲರಾಗಿದ್ದ ರಾಮ್ ನಾಥ್ ಕೋವಿಂದ್ ಅವರ ಹೆಸರನ್ನು ಸರ್ಕಾರ ಅಭ್ಯರ್ಥಿಯಾಗಿ ಆಯ್ಕೆ ಮಾಡಿತು.                                                                         

2.            ಒಡಿಶಾದ ಬುಡಕಟ್ಟು ಮಹಿಳೆ ಮತ್ತು ಜಾರ್ಖಂಡ್ ನ ಮಾಜಿ ರಾಜ್ಯಪಾಲರಾದ ಶ್ರೀಮತಿ ಮುರ್ಮು ಅವರ ಆಯ್ಕೆಯು ಬಿಜೆಪಿಯ ಲೆಕ್ಕಾಚಾರದ ಕ್ರಮವೆಂದು ಪರಿಗಣಿಸಲಾಗಿದೆ.

ಇದು ಜಾರ್ಖಂಡ್ ನ ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾದ ಬೆಂಬಲವನ್ನು ಮಾತ್ರವಲ್ಲದೆ, ಒಡಿಶಾದ ನವೀನ್ ಪಟ್ನಾಯಕ್ ಅವರ ಬೆಂಬಲವನ್ನು ಸೆಳೆಯುತ್ತದೆ.                                                                                                                                         

3.            ಮುರ್ಮು ಅವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬೆಂಬಲದ ಭರವಸೆ ನೀಡಿದ್ದಾರೆ. 

            4.            ಶಿವಸೇನೆಯ ವಿಭಜನೆ ಸೇರಿದಂತೆ ಎರಡು ಬಣಗಳು ಶ್ರೀಮತಿ ಮುರ್ಮು ಅವರನ್ನು ಬೆಂಬಲಿಸುವ ವಾಗ್ದಾಣ ನೀಡಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಏಕನಾಥ್ ಶಿಂಧೆ ಬಣ ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸುತ್ತಿದ್ದು, ಉದ್ಧವ್ ಠಾಕ್ರೆ ನೇತೃತ್ವದ ಬಣ ಕೂಡ ಅವರನ್ನು ಬೆಂಬಲಿಸುತ್ತಿದೆ.     

                                 

5.            ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಬೆಂಬಲಿಸುತ್ತಿದ್ದ ಠಾಕ್ರೆ ಬಣ, ಉದ್ಧವ್ ಠಾಕ್ರೆ ಅವರನ್ನು 16 ಸಂಸದರು ಭೇಟಿಯಾಗಿ ಮುರ್ಮು ಅವರಿಗೆ ಮತ ಚಲಾಯಿಸುವಂತೆ ಸೂಚಿಸಿದ ನಂತರ ಬದಲಾಯಿಸಲು ತೀರ್ಮಾನ ಮಾಡಿದೆ. ಶ್ರೀಮತಿ ಮುರ್ಮು ಅವರನ್ನು ಬೆಂಬಲಿಸಲು ಶ್ರೀ ಠಾಕ್ರೆ ಅವರನ್ನು ಬಲವಂತಪಡಿಸಲಾಗಿದೆ ಎಂದು ಸಿನ್ಹಾ ಹೇಳಿದ್ದಾರೆ.            

6.            ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಮಾಜಿ ಕೇಂದ್ರ ಸಚಿವರಾಗಿದ್ದ ಶ್ರೀ ಸಿನ್ಹಾ ಅವರು ಬಳಿಕ ತೃಣಮೂಲ ಕಾಂಗ್ರೆಸ್ಗೆ ಸೇರಿದ್ದರು.  ಮೂವರು ಉದ್ದೇಶಿತ ಅಭ್ಯರ್ಥಿಗಳು ಚುನಾವಣೆಗೆ ನಿರಾಕರಿಸಿದ  ನಂತರ ಪ್ರತಿಪಕ್ಷಗಳು ಶ್ರೀ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿ ಪ್ರತಿಪಕ್ಷವು ಘೋಷಣೆ ಮಾಡಿದೆ. 

7.            ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ವಿವಿಧ ಕಾರಣಗಳನ್ನು ಉಲ್ಲೇಖಿಸಿ ರಾಷ್ಟ್ರಪತಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.     

8.            ರಾಷ್ಟ್ರಪತಿಯನ್ನು ಎಲೆಕ್ಟೋರಲ್ ಕಾಲೇಜಿನ ಸದಸ್ಯರು ಚುನಾಯಿಸುತ್ತಾರೆ, ಇದರಲ್ಲಿ ಸಂಸತ್ತಿನ ಉಭಯ ಸದನಗಳು ಮತ್ತು ಎಲ್ಲಾ ರಾಜ್ಯಗಳ ಶಾಸನ ಸಭೆಗಳು ಮತ್ತು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಚುನಾಯಿತ ಸದಸ್ಯರು ಮತದಾನ ಮಾಡಲಿದ್ದಾರೆ.                    

9.            ಮತದಾನಕ್ಕಾಗಿ ಯಾವುದೇ ಪಕ್ಷದ ವಿಪ್ ಅನ್ನು ಹೊರಡಿಸಲಾಗುವುದಿಲ್ಲ. ಸಂಸದರು ಮತ್ತು ಶಾಸಕರು ತಮಗೆ ಬೇಕಾದಂತೆ ಮತ ಚಲಾಯಿಸಬಹುದು. ಜುಲೈ 21 ರಂದು ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ಹೊಸ ರಾಷ್ಟ್ರಪತಿಗಳು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

10.          ಕರ್ನಾಟಕದ ಪ್ರಮುಖ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ಮುರ್ಮು ಅವರನ್ನು ಬೆಂಬಲಿಸುವುದಾಗಿ ಘೋಷಿಸಿದೆ.

Join Whatsapp
Exit mobile version