ಹೈದರಾಬಾದ್: ದಿಢೀರ್ ಭೂಮಿ ಕುಸಿದ ಪರಿಣಾಮ ತರಕಾರಿ ಮಾರಾಟ ಮಾಡುತ್ತಿದ್ದವರ ಕೈಗಾಡಿಗಳೂ ಸೇರಿದಂತೆ ಹಲವು ಕಾರು ಮತ್ತು ಬೈಕ್ ಗಳು ಗುಂಡಿಯಲ್ಲಿ ಸಿಲುಕಿಕೊಂಡ ಘಟನೆ ಹೈದರಾಬಾದ್ ಗೋಶಾಮಹಲ್ ಬಳಿ ನಡೆದಿದೆ.
ಒಳಚರಂಡಿ ಕುಸಿದ ಪರಿಣಾಮ ಮೂವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಪ್ರದೇಶದಲ್ಲಿ ಪ್ರತಿ ಶುಕ್ರವಾರ ಮಾರುಕಟ್ಟೆ ನಡೆಯುತ್ತದೆ. ಎಂದಿನ ವಾರದಂತೆ ಇಂದು ಸಹ ಮಾರುಕಟ್ಟೆ ನಡೆಯುತ್ತಿದ್ದಾಗ ಭೂಮಿ ದಿಢೀರ್ ಬಿರುಕು ಬಿಟ್ಟಿತು. ಒಳಚರಂಡಿ ಕಾಲುವೆ ಇದಾಗಿದ್ದು ದೊಡ್ಡ ಅನಾಹುತ ತಪ್ಪಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.