ಕರ್ನಾಟಕ ಮೂಲದ ಡಾ. ವಿವೇಕ್ ಮೂರ್ತಿ ಅಮೆರಿಕದ ನೂತನ ‘ಸರ್ಜನ್ ಜನರಲ್’

Prasthutha|

ವಾಷಿಂಗ್ಟನ್ : ಕರ್ನಾಟಕ ಮೂಲದ ಅಮೆರಿಕನ್ ಡಾ. ವಿವೇಕ್ ಮೂರ್ತಿ ಅವರನ್ನು ಮತ್ತೊಮ್ಮೆ ‘ಸರ್ಜನ್ ಜನರಲ್’ ಆಗಿ ಅಲ್ಲಿನ ನಿಯೋಜಿತ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿದ್ದಾರೆ.

- Advertisement -

ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅಧಿಕಾರಾವಧಿಯಲ್ಲಿ ‘ಸರ್ಜನ್ ಜನರಲ್’ ಆಗಿದ್ದ ಡಾ. ವಿವೇಕ್ ಮೂರ್ತಿ, ಇದೀಗ ಮತ್ತೊಮ್ಮೆ ಬೈಡನ್ ಅವಧಿಯಲ್ಲಿ ‘ಸರ್ಜನ್ ಜನರಲ್’ ಆಗಿ ಅಧಿಕಾರ ವಹಿಸಲಿದ್ದಾರೆ. ಟ್ರಂಪ್ ಅವಧಿಯಲ್ಲಿ ಡಾ. ಮೂರ್ತಿ ಈ ಹುದ್ದೆಯಿಂದ ನಿರ್ಗಮಿಸಿದ್ದರು.

ಪ್ರಸ್ತುತ ಕೋವಿಡ್ 19 ಕುರಿತಂತೆ ಬೈಡನ್ ರಚಿಸಿರುವ ಸಲಹಾ ಮಂಡಳಿಯ ಸಹ ಅಧ್ಯಕ್ಷರಾಗಿ ಡಾ. ಮೂರ್ತಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -

ಡಾ. ಮೂರ್ತಿ ಅವರ ಮೂಲ ಕರ್ನಾಟಕದ ಮಂಡ್ಯ ಜಿಲ್ಲೆ. 1978ರಲ್ಲಿ ಅವರ ತಂದೆ ಅಮೆರಿಕಕ್ಕೆ ವಲಸೆ ಹೋಗಿ, ಅಲ್ಲಿ ನೆಲೆ ನಿಂತಿದ್ದರು. ಮಿಯಾಮಿಯಲ್ಲಿ ವೈದ್ಯರಾಗಿ ಡಾ. ಮೂರ್ತಿ ಸೇವೆ ಸಲ್ಲಿಸುತ್ತಿದ್ದರು. ಕೋವಿಡ್ 19 ಸೋಂಕಿನ ಸಂಕಷ್ಟದ ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸುವುದು ನೂತನ ಸರಕಾರಕ್ಕೆ ಸವಾಲಿನ ವಿಷಯವಾಗಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ಮೂಲದ ಡಾ. ಮೂರ್ತಿ ಅವರನ್ನು ಅಮೆರಿಕದ ‘ಸರ್ಜನ್ ಜನರಲ್’ ನಾಮನಿರ್ದೇಶನ ಮಾಡಿರುವುದು, ಮಹತ್ವದ ಜವಾಬ್ದಾರಿ ನೀಡಿದಂತಾಗಿದೆ.

Join Whatsapp