Home ಟಾಪ್ ಸುದ್ದಿಗಳು ಗೋಹತ್ಯೆ ನಿಷೇಧ ಕಾನೂನಿನಿಂದ ಸಂವಿಧಾನಕ್ಕೆ ಅಪಚಾರ, ಪೌಷ್ಟಿಕ ಆಹಾರಕ್ಕೆ ಸಂಚಕಾರ: ಡಾ.ಸಿಲ್ವಿಯಾ

ಗೋಹತ್ಯೆ ನಿಷೇಧ ಕಾನೂನಿನಿಂದ ಸಂವಿಧಾನಕ್ಕೆ ಅಪಚಾರ, ಪೌಷ್ಟಿಕ ಆಹಾರಕ್ಕೆ ಸಂಚಕಾರ: ಡಾ.ಸಿಲ್ವಿಯಾ

ಬೆಂಗಳೂರು: ಆಹಾರ ನಮ್ಮ ಹಕ್ಕು ಕರ್ನಾಟಕ ಅಭಿಯಾನದಡಿ ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಮಾತನಾಡಿದ ಸಾರ್ವಜನಿಕ ಆರೋಗ್ಯ ತಜ್ಞೆ ಡಾ. ಸಿಲ್ವಿಯಾ ಕರ್ಪಗಂ ಅವರು, ಜಾನುವಾರು ಮಾಂಸ ಸಮರ್ಪಕವಾಗಿ ದೊರೆಯದಿರುವುದು ಬಡವರ ಆಹಾರ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಆರೋಪಿಸಿದ್ದಾರೆ.


ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ರಾಜ್ಯದಲ್ಲಿ ಪೌಷ್ಟಿಕ ಆಹಾರದ ಕೊರತೆ ಉಂಟಾಗಿದೆ. ಕರ್ನಾಟಕದಲ್ಲಿ 2020ರಲ್ಲಿ ಜಾರಿಗೆ ತಂದ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯು ಸಂವಿಧಾನದ 29(1) ವಿಧಿ ಕೊಡಮಾಡಿದ ಹಕ್ಕನ್ನು ಕಸಿದುಕೊಂಡಿದೆ. ಆಹಾರದ ಹಕ್ಕಿನ ರಕ್ಷಣೆ ಅಗತ್ಯ. ಮುಖ್ಯಮಂತ್ರಿ ಬೊಮ್ಮಾಯಿಯವರು ಈ ಕಾಯ್ದೆಯನ್ನು ಹಿಂದೆಗೆದುಕೊಳ್ಳಲಿ ಎಂದರು.


ಮೋಹನ್ ರಾಜ್ ಮಾತನಾಡಿ, ಬಿಜೆಪಿ ಈ ನಕಲಿ ದನ ಭಕ್ತಿ ಬಿಟ್ಟು ಗೋವಾ, ಈಶಾನ್ಯ ರಾಜ್ಯಗಳು ಮತ್ತು ಕೇರಳದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಿ. ಇಡೀ ದೇಶಕ್ಕೆ ಅಗತ್ಯವಿದ್ದರೆ ಕಾನೂನು ತರಲಿ. ಜನರ ಆಹಾರದ ತಟ್ಟೆಗೆ ಕಲ್ಲು ಹಾಕುವ ಕೆಲಸ ಮಾಡದಿರಲಿ ಎಂದರು.

Join Whatsapp
Exit mobile version