Home ಟಾಪ್ ಸುದ್ದಿಗಳು ಡಾ. ಮಾಣಿಕ್ ಸಹಾ ತ್ರಿಪುರಾ ನೂತನ ಮುಖ್ಯಮಂತ್ರಿ

ಡಾ. ಮಾಣಿಕ್ ಸಹಾ ತ್ರಿಪುರಾ ನೂತನ ಮುಖ್ಯಮಂತ್ರಿ

ತ್ರಿಪುರಾ: ಡಾ. ಮಾಣಿಕ್ ಸಹಾ ತ್ರಿಪುರಾ ನೂತನ ಮುಖ್ಯಮಂತ್ರಿ ಆಯ್ಕೆಯಾಗಿದ್ದಾರೆ.

ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬಿಪ್ಲಬ್ ದೇವ್ ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಣಿಕ್ ಸಹಾ ಅವರನ್ನು ತ್ರಿಪುರಾದ ನೂತನ ಮುಖ್ಯಮಂತ್ರಿಯಾಗಿ ಘೋಷಿಸಲಾಗಿದೆ.

ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಮಾಣಿಕ್ ಸಹಾ ಅವರನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿವೆ.

ದಂತ ವೈದ್ಯರಾಗಿರುವ ಮಾಣಿಕ್ ಸಹಾ ಅಧಿಕಾರದ ಗದ್ದುಗೆ ಏರಿದ್ದಾರೆ.

ತ್ರಿಪುರದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದೆ. ಪಕ್ಷವನ್ನು ಬಲಪಡಿಸಲು ನಾನು ಕೆಲಸ ಮಾಡಬೇಕೆಂದು ಪಕ್ಷವು ಬಯಸುತ್ತದೆ ಎಂದು ರಾಜೀನಾಮೆ ನಂತರ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದರು.

ತ್ರಿಪುರಾ ಬಿಜೆಪಿಯ ರಾಜ್ಯ ಘಟಕದಲ್ಲಿ ಆಂತರಿಕ ಕಚ್ಚಾಟದ ವರದಿಗಳ ನಂತರ ಈ ಬೆಳವಣಿಗೆ ನಡೆದಿದೆ.

Join Whatsapp
Exit mobile version