Home ಕರಾವಳಿ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ. ಫಾತಿಮಾ ರಈಸಗೆ ಅತ್ಯುತ್ತಮ ವಿದ್ಯಾರ್ಥಿನಿ ಪದಕ ಪ್ರದಾನ

ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ. ಫಾತಿಮಾ ರಈಸಗೆ ಅತ್ಯುತ್ತಮ ವಿದ್ಯಾರ್ಥಿನಿ ಪದಕ ಪ್ರದಾನ

ಮಂಗಳೂರು: 2021ನೇ ಸಾಲಿನ ರೇಡಿಯೋ ಡಯಗ್ನೋಸಿಸ್ ಎಂಡಿ ವಿಭಾಗದ ಅತ್ಯುತ್ತಮ ವಿದ್ಯಾರ್ಥಿಗೆ ನೀಡಲಾಗುವ ಪ್ರಫುಲ್ಲ ಎಸ್ ಹೆಗ್ಡೆ ದತ್ತಿ ಚಿನ್ನದ ಪದಕವನ್ನು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ. ಫಾತಿಮಾ ರಈಸ ಅವರಿಗೆ ನೀಡಲಾಯಿತು.

ಮಂಗಳೂರಿನ ಡಾ. ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್ ನಲ್ಲಿ ಇತ್ತೀಚಿಗೆ ನಡೆದ ಕೆಎಂಸಿ ಕಾಲೇಜಿನ ಕಾಲೇಜು ವಾರ್ಷಿಕೋತ್ಸವ ಹಾಗು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಚಿನ್ನದ ಪದಕವನ್ನು ನೀಡಲಾಯಿತು.

ಅನಿವಾಸಿ ಭಾರತೀಯ ಉದ್ಯಮಿ ಮುಮ್ತಾಝ್ ಹುಸೇನ್ ಹಾಗು ಇಶ್ರತ್ ಜಹಾನ್ ಖಾನ್ ದಂಪತಿಯ ಪುತ್ರಿಯಾಗಿರುವ ಡಾ. ಫಾತಿಮಾ ಅವರು ದೋಹ ಕತರ್ ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದು, ಸದ್ಯ ಮಂಗಳೂರು ಕೆಎಂಸಿಯಲ್ಲಿ  ಸೀನಿಯರ್ ರೆಸಿಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಹಾಗು ನರ ಆರೋಗ್ಯ ತಜ್ಞ ಡಾ. ಸಫ್ವಾನ್ ಅಹ್ಮದ್ ಅವರ ಪತ್ನಿ.

ಮಂಗಳೂರು ಕೆಎಂಸಿಯಲ್ಲಿ ರೇಡಿಯೋ ಡಯಗ್ನೋಸಿಸ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಸಂತೋಷ್ ರೈ ಅವರು ಡಾ. ಫಾತಿಮಾ ಅವರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಮಾಹೆ ಉಪಕುಲಪತಿ ಲೆ.ಜ. (ಡಾ.) ಎಂಡಿ ವೆಂಕಟೇಶ್ ಅವರಿಂದ ಚಿನ್ನದ ಪದಕವನ್ನು ಸ್ವೀಕರಿಸಿದರು.

Join Whatsapp
Exit mobile version