Home ಟಾಪ್ ಸುದ್ದಿಗಳು ಡಾ.ಕೆ. ಸುಧಾಕರ್ ಒಂದು ಮತದ ಮುನ್ನಡೆ ಸಾಧಿಸಿದರೂ ರಾಜೀನಾಮೆ ನೀಡುತ್ತೇನೆ: ಪ್ರದೀಪ್ ಈಶ್ವರ್

ಡಾ.ಕೆ. ಸುಧಾಕರ್ ಒಂದು ಮತದ ಮುನ್ನಡೆ ಸಾಧಿಸಿದರೂ ರಾಜೀನಾಮೆ ನೀಡುತ್ತೇನೆ: ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಅವರು ಒಂದು ಮತದ ಮುನ್ನಡೆ ಸಾಧಿಸಿದರೂ ನಾನು ರಾಜೀನಾಮೆ ನೀಡುತ್ತೇನೆ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸುಧಾಕರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಗಿಂತ ಒಂದು ಮತ ಹೆಚ್ಚು ಪಡೆದಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.ನಾನು ನನ್ನ ಮಾತಿಗೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ಎಸ್‍ಎಸ್‍ಎಲ್‍ಸಿ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಾರಿ ಹತ್ತನೇ ತರಗತಿಯ ಪರೀಕ್ಷೆಯ ಸಂದರ್ಭದಲ್ಲಿ ಭಾರೀ ಸ್ಟ್ರಿಕ್ಟ್ ಮಾಡಿಸಿದ್ದಾರೆ. ಸಿಸಿ ಕ್ಯಾಮೆರಾ ಹಾಕಿ ಪರೀಕ್ಷೆ ನಡೆಸಿದ್ದಾರೆ. ಮಾಸ್ ಕಾಪಿ ಹೊಡೆಯೋಕೆ ಕಡಿವಾಣ ಹಾಕಿದ್ದಾರೆ. ಹಿಂದೆಲ್ಲಾ ಮಾಸ್ ಕಾಪಿ ನಡೆಯುತ್ತಿತ್ತು. ಆದರೆ ಈ ಭಾರಿ ಮಾಸ್ ಕಾಪಿ ನಡೆದಿಲ್ಲ ಎಂದರು.

Join Whatsapp
Exit mobile version