Home ಟಾಪ್ ಸುದ್ದಿಗಳು ಮಗನಿಗೆ ಟಿಕೆಟ್‌ ಸಂಶಯ: ಮನೆ ಮುಂದೆ ಜನ ಸೇರಿಸಿದ ಈಶ್ವರಪ್ಪ

ಮಗನಿಗೆ ಟಿಕೆಟ್‌ ಸಂಶಯ: ಮನೆ ಮುಂದೆ ಜನ ಸೇರಿಸಿದ ಈಶ್ವರಪ್ಪ

ಶಿವಮೊಗ್ಗ: ಮಾಜಿ ಡಿಸಿಎಂ ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್‌ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಆದರೆ ಟಿಕೆಟ್‌ ಸಿಗುವುದು ಅನುಮಾನ ಎಂಬ ಸುದ್ದಿಗಳು ಹರಿದಾಡುತ್ತಿರುವುದರಿಂದ ಈಶ್ವರಪ್ಪ ಮನೆ ಮುಂದೆ ಜನರ ದಂಡನ್ನು ಸೇರಿಸಲಾದ ಘಟನೆ ಕಳೆದ ರಾತ್ರಿ ನಡೆದಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಮಗ ಕಾಂತೇಶ್‌, ಸದ್ಯ ಗೊಂದಲ ಸೃಷ್ಟಿಯಾಗಿರುವುದರಿಂದ ನಮ್ಮ ಮನೆಗೆ ಬೆಂಬಲಿಗರು ಬಂದಿದ್ದಾರೆ. ಯಡಿಯೂರಪ್ಪ ಅವರು ಆಶೀರ್ವಾದ ಮಾಡಿದ್ದರು. ಹೀಗಾಗಿ ಹಾವೇರಿಯಲ್ಲಿ ಟಿಕೆಟ್‌ ಸಿಗುತ್ತದೆ ಹಾಗೂ ಕ್ಷೇತ್ರದಲ್ಲಿ ಓಡಾಡುವಂತೆ ಸೂಚನೆ ಬಂದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಓಡಾಟ ಮಾಡಿದ್ದೆ. ಈಗ ಬಸವರಾಜ ಬೊಮ್ಮಾಯಿ ಹೆಸರು ಕೇಳಿಬರುತ್ತಿದೆ ಎಂದಿದ್ದಾರೆ.

ಹಾಗಾಗಿ ಕೆಲ ಗೊಂದಲಗಳು ಸೃಷ್ಟಿಯಾಗಿವೆ. ಅದಕ್ಕೇ ಅಭಿಮಾನಿಗಳು ಮನೆ ಮುಂದೆ ಸೇರಿದ್ದಾರೆ. ಆದರೆ ಈಗಲೂ ನನಗೆ ವಿಶ್ವಾಸ ಇದೆ. ಟಿಕೆಟ್‌ ನನಗೆ ಸಿಕ್ಕೇ ಸಿಗುತ್ತದೆ ಎಂದರು.

ಹೈಕಮಾಂಡ್‌ ಸೂಚನೆ ಮೇರೆಗೆ ನಮ್ಮ ತಂದೆ ರಾಜಕೀಯ ನಿವೃತ್ತಿ ಹೊಂದಿದ್ದರು. ಇದೀಗ ನಮ್ಮ ಕುಟುಂಬಕ್ಕೆ ಲೋಕಸಭಾ ಟಿಕೆಟ್‌ ಸಿಕ್ಕೇ ಸಿಗುತ್ತದೆ. ನಾವು ಬಿಜೆಪಿಯನ್ನು ತಾಯಿಯಂತೆ ಪ್ರೀತಿಸುತ್ತೇವೆ. ಟಿಕೆಟ್ ಸಿಗುತ್ತದೆ ಎಂದರು.

Join Whatsapp
Exit mobile version