‘ಡಬಲ್ ಇಂಜಿನ್’-‘ಡಬಲ್ ಧೋಖಾ’: ಬಿಜೆಪಿ ಪ್ರಣಾಳಿಕೆಯ ಬಗ್ಗೆ ಬಿ.ಕೆ.ಹರಿಪ್ರಸಾದ್ ಕಿಡಿ

Prasthutha|

ಬೆಂಗಳೂರು: ಡಬಲ್ ಇಂಜಿನ್ ಸರಕಾರದ ಡಬಲ್ ಧೋಖಾ ಎಂದು ಬಿಜೆಪಿ ಪ್ರಣಾಳಿಕೆಯ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಬಿ.ಕೆ.ಹರಿಪ್ರಸಾದ್ ಕಿಡಿಕಾರಿದ್ದಾರೆ.

- Advertisement -


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸೈಕಲ್, ಮೊಟ್ಟೆ, ಶೂಗಳನ್ನು ನೀಡಲಾಗದ ಬಿಜೆಪಿ ಇದೀಗ ಹಾಲು ವಿತರಣೆ ಎಂಬ ಸುಳ್ಳು ಭರವಸೆ ನೀಡಿದೆ.


ಇಡೀ ದೇಶಕ್ಕೆ ಮಾದರಿಯಾದ ಸರ್ವಜನಾಂಗದ ಶಾಂತಿಯ ತೋಟದಂತಿರುವ ಕರ್ನಾಟಕಕ್ಕೆ ಉತ್ತರ ಪ್ರದೇಶ, ಗುಜರಾತ್ ಮಾದರಿ ಅಲ್ಲ. ಉತ್ತರ ಪ್ರದೇಶ ಕರ್ನಾಟಕಕ್ಕಿಂತ 200 ವರ್ಷಗಳ ಹಿಂದಿದೆ, ಗುಜರಾತ್ 50 ವರ್ಷಗಳಷ್ಟು ಹಿಂದಿದೆ ಆದ್ದರಿಂದ ಇಂತಹ ರಾಜ್ಯಗಳು ಕರ್ನಾಟಕಕ್ಕೆ ಮಾದರಿ ಅಲ್ಲ ಎಂದು ಹೇಳಿದ್ದಾರೆ. ಕೊಡಗಿನ ಕಾಂಗ್ರೆಸ್ ಅಭ್ಯರ್ಥಿಗಳು ಹೊರಗಿನವರು ಎನ್ನುವ ಸಂಸದ ಪ್ರತಾಪ್ ಸಿಂಹ ಏನೂ ಕೊಡಗಿನವರೇ..? ಇಂತಹ ಮಾತುಗಳು ಸಂಸದರಿಗೆ ಶೋಭೆ ತರುವಂತಹದ್ದಲ್ಲ. ಬಿಜೆಪಿಯ ಭ್ರಷ್ಟಾಚಾರದ ಮಾಡೆಲ್ ಮಾಡಾಳು ವೀರೂಪಾಕ್ಷಪ್ಪ-ಬಿಜೆಪಿಯ ಭ್ರಷ್ಟಾಚಾರ, ಬೆಲೆ ಏರಿಕೆಯಿಂದ ಜನರು ರೋಸಿ ಹೋಗಿದ್ದಾರೆ ಎಂದರು.

Join Whatsapp