Home ಟಾಪ್ ಸುದ್ದಿಗಳು “ನನ್ನ ಭದ್ರತೆಗೆ ನೇಮಿಸಿದ ಪೊಲೀಸರ ಮೇಲೆ ವಿಶ್ವಾಸವಿಲ್ಲ, ನನ್ನನ್ನು ಶೂಟ್ ಮಾಡಬಹುದು” : ಎಸ್ಪಿ ಶಾಸಕ...

“ನನ್ನ ಭದ್ರತೆಗೆ ನೇಮಿಸಿದ ಪೊಲೀಸರ ಮೇಲೆ ವಿಶ್ವಾಸವಿಲ್ಲ, ನನ್ನನ್ನು ಶೂಟ್ ಮಾಡಬಹುದು” : ಎಸ್ಪಿ ಶಾಸಕ ಅಬ್ದುಲ್ಲಾ ಅಝಂ ಖಾನ್ ಆತಂಕ

ಲಕ್ನೋ: ತನ್ನ ಭದ್ರತೆಗೆ ನೇಮಿಸಿದ ಪೊಲೀಸರನ್ನು ನಂಬುವಂತಿಲ್ಲ ಮತ್ತು ನನ್ನನ್ನೇ ಗುಂಡಿಕ್ಕಿ ಹತ್ಯೆ ನಡೆಸಬಹುದೆಂದು ಆತಂಕವನ್ನುಶಾಸಕ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಅಬ್ದುಲ್ಲಾ ಅಝಂ ಖಾನ್ ವ್ಯಕ್ತಪಡಿಸಿದ್ದಾರೆ.

ರಾಮ್ ಪುರದ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಟಿಕೆಟ್ ನಲ್ಲಿ ಸ್ಪರ್ಧಿಸಿರುವ ಅಬ್ದುಲ್ಲಾ ಅಝಂ ಖಾನ್ ಈ ಕುರಿತು ಪ್ರತಿಕ್ರಿಯಿಸುತ್ತಾ, ನನ್ನ ಭದ್ರತೆಗೆ ನೇಮಿಸಲ್ಪಟ್ಟ ಪೊಲೀಸರೇ ಶೂಟ್ ಮಾಡಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ, ಹಲವು ಅಧಿಕಾರಿಗಳು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಒಬ್ಬಂಟಿಯಾಗಿದ್ದೇನೆ. ನನ್ನ ಜೊತೆ ಯಾರೂ ಕೂಡ ಇಲ್ಲ. ಭದ್ರತೆಗಾಗಿ ನನ್ನ ಜೊತೆಗಿರುವ ಪೊಲೀಸರ ಮೇಲೆಯೇ ನಂಬಿಕೆ ಇಲ್ಲ. ಪೊಲೀಸರು ನನ್ನನ್ನು ಗುಂಡು ಹಾರಿಸಿ ಕೊಲ್ಲಬಹುದು ಎಂಬ ಗಂಭೀರ ಆರೋಪ ಹೊರಿಸಿದ್ದಾರೆ.

ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದಿಂದ ಸಂಸದ ಅಝಂ ಖಾನ್ ಅವರನ್ನು ರಾಮ್ ಪುರ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಪ್ರಸಕ್ತ ಸಂಸದ ಅಝಂ ಖಾನ್ ವಿರುದ್ಧ ಭೂಕಬಳಿಕೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಜೈಲಿನಲ್ಲಿದ್ದಾರೆ.

Join Whatsapp
Exit mobile version