Home ಟಾಪ್ ಸುದ್ದಿಗಳು ‘ನನ್ನನ್ನು ಮುಟ್ಟಬೇಡಿ, ನೀವು ಮಹಿಳೆ’: ಪ್ರತಿಭಟನಾ ವೇಳೆ ಮಹಿಳಾ ಪೊಲೀಸರಿಗೆ ಬಿಜೆಪಿ ನಾಯಕನಿಂದ ಅವಮಾನ

‘ನನ್ನನ್ನು ಮುಟ್ಟಬೇಡಿ, ನೀವು ಮಹಿಳೆ’: ಪ್ರತಿಭಟನಾ ವೇಳೆ ಮಹಿಳಾ ಪೊಲೀಸರಿಗೆ ಬಿಜೆಪಿ ನಾಯಕನಿಂದ ಅವಮಾನ

ಸುವೇಂದು ಅಧಿಕಾರಿ ನಡೆಗೆ ವ್ಯಾಪಕ ಆಕ್ರೋಶ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರು ಮಂಗಳವಾರ ತಮ್ಮ ಪಕ್ಷದ ಪ್ರತಿಭಟನಾ ಮೆರವಣಿಗೆಯ ನಡುವೆ ತಮ್ಮನ್ನು ಬಂಧಿಸಲು ಪ್ರಯತ್ನಿಸುತ್ತಿರುವ ಪೊಲೀಸ್ ಮಹಿಳೆಯರನ್ನು ತರಾಟೆಗೆ ತೆಗೆದುಕೊಂಡು ಅಪಮಾನ ಮಾಡಿದ್ದಾರೆ.

ಹೇಸ್ಟಿಂಗ್ಸ್ ಪ್ರದೇಶದ ಪೊಲೀಸ್ ತರಬೇತಿ ಶಾಲೆಯ ಬಳಿ ಸುವೇಂದು ಅವರನ್ನು ತಡೆಯಲಾಗಿದ್ದು, ಅಲ್ಲಿ ಬಿಜೆಪಿ ಬೆಂಬಲಿಗರು ಹೌರಾದ ರಾಜ್ಯ ಸಚಿವಾಲಯ ‘ನಬನ್ನಾ’ ಕಡೆಗೆ ಹೋಗುವುದನ್ನು ತಡೆಯಲು ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿತ್ತು.

ಜೈಲಿನ ವ್ಯಾನ್ ಗೆ ಕರೆದೊಯ್ಯಲು ಪ್ರಯತ್ನಿಸುತ್ತಿದ್ದ ಮಹಿಳಾ ಪೊಲೀಸ್ ಅಧಿಕಾರಿಗಳೊಂದಿಗೆ ‘ನನ್ನನ್ನು ಮುಟ್ಟಬೇಡಿ… ನೀವು ಮಹಿಳೆಯರು’ ಎಂದು ಅಸ್ಪ್ರಶ್ಯ ಭಾವದಿಂದ ಹೇಳಿದ್ದು, ತಾನೊಬ್ಬ ಕಾನೂನನ್ನು ಪಾಲಿಸುವ ನಾಗರಿಕ ಎಂದು ಪ್ರತಿಪಾದಿಸಿದ ಸುವೇಂದು, ತನ್ನೊಂದಿಗೆ ಮಾತನಾಡಲು ಪುರುಷ ಪೊಲೀಸ್ ಅಧಿಕಾರಿಗಳನ್ನು ಕರೆಯಬೇಕೆಂದು ಒತ್ತಾಯಿಸಿದರು.

ಮಹಿಳೆಯರ ವಿಚಾರವಾಗಿ ಬಿಜೆಪಿ ನಾಯಕನ ಅಸ್ಪ್ರಶ್ಯ ಮನೋಭಾವಕ್ಕೆ ಇದೀಗ ಸಾಮಾಜಿಕ ವಲಯಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

Join Whatsapp
Exit mobile version