ಶಾಂಘೈ: ಕೋವಿಡ್ ಸೋಂಕಿನ ಮೂಲ ಚೀನಾ ದೇಶದ ಶಾಂಘೈನಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಅಧಿಕವಾಗತೊಡಗಿದೆ. ಹೀಗಾಗಿ ಸೋಂಕು ನಿಯಂತ್ರಣಕ್ಕಾಗಿ ಶಾಂಘೈನ ಸ್ಥಳೀಯ ಆಡಳಿತವು ಒಂದೊಂದಾಗಿ ಕಠಿಣ ನಿಯಮಗಳನ್ನು ವಿಧಿಸುತ್ತಿದೆ.
ಆದರೆ, ಶಾಂಘೈನಲ್ಲಿ ವಿಧಿಸಲಾಗುತ್ತಿರುವ ಕಠಿಣ ನಿಯಮದ ವಿರುದ್ಧ ಅಲ್ಲಿನ ನಾಗರಿಕರು ಆಕ್ರೋಶಿತರಾಗಿದ್ದಾರೆ.
ಜಾಲತಾಣದಲ್ಲಿ ಟ್ವಿಟ್ಟರ್ ಬಳಕೆದಾರರೊಬ್ಬರು ವೀಡಿಯೋ ಹಂಚಿಕೊಂಡಿದ್ದು,”ಇಂದು ರಾತ್ರಿಯಿಂದ ದಂಪತಿ ಜೊತೆಯಾಗಿ ಮಲಗುವಂತಿಲ್ಲ, ಪರಸ್ಪರ ಚುಂಬಿಸುವಂತಿಲ್ಲ.. ಆಲಿಂಗಿಸಿಕೊಳ್ಳುವುದಕ್ಕೂ ಅವಕಾಶವಿಲ್ಲ. ಮತ್ತು ಪ್ರತ್ಯೇಕವಾಗಿ ಭೋಜನ ಸೇವಿಸಿರಿ. ನಿಮ್ಮ ಸಹಕಾರಕ್ಕೆ ಧನ್ಯವಾದಗಳು” ಎಂದು ಆರೋಗ್ಯ ಕಾರ್ಯಕರ್ತೆಯೊಬ್ಬಳು ಮೈಕ್ ಮೂಲಕ ಪ್ರಕಟಿಸುತ್ತಿರುವುದು ವೀಡಿಯೋದಲ್ಲಿ ಕಾಣಬಹುದಾಗಿದೆ.
ಆದರೆ, ಶಾಂಘೈ ನಗರದಲ್ಲಿ ಕೇವಲ ಕಠಿಣ ನಿಯಮಗಳಷ್ಟೇ ವಿಧಿಸಲಾಗುತ್ತಿದ್ದು, ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಒದಗಿಸಲಾಗುತ್ತಿಲ್ಲ. ಹೀಗಾಗಿ ಆಹಾರಕ್ಕಾಗಿ ಪರದಾಡುವಂತಾಗಿದೆ ಎಂದು ಅಲ್ಲಿನ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಲಿ ವಿಧಿಸಲಾದ ನಿಯಮಾವಳಿಯನ್ನು “ಹಾಸ್ಯಾಸ್ಪದ” ಎಂದು ಟೀಕಿಸಿದ್ದಾರೆ.