Home ರಾಷ್ಟ್ರೀಯ Yea ಎಂದು ಹೇಳಬೇಡಿ, ಇದು ಕಾಫಿ ಶಾಪ್ ಅಲ್ಲ: ವಿಚಾರಣೆಯ ಸಮಯದಲ್ಲಿ ವಕೀಲರಿಗೆ ಸಿಜೆಐ ಚಂದ್ರಚೂಡ್...

Yea ಎಂದು ಹೇಳಬೇಡಿ, ಇದು ಕಾಫಿ ಶಾಪ್ ಅಲ್ಲ: ವಿಚಾರಣೆಯ ಸಮಯದಲ್ಲಿ ವಕೀಲರಿಗೆ ಸಿಜೆಐ ಚಂದ್ರಚೂಡ್ ತರಾಟೆ

ದೆಹಲಿ: ನೀವು ಕೋರ್ಟ್ ಕೊಠಡಿಯಲ್ಲಿದ್ದೀರಿ ಹೊರತು ಕೆಫೆಯಲ್ಲಲ್ಲ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಪ್ರಕರಣವೊಂದಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ವಕೀಲರನ್ನು ತರಾಟೆಗೆ ತೆಗೆದುಕೊಂಡರು.


ಸಿಜೆಐ ಚಂದ್ರಚೂಡ್ ವಕೀಲರಲ್ಲಿ ನೀವು ಎಲ್ಲದಕ್ಕೂ ‘yea’ ಎಂದು ಹೇಳುವ ಬದಲು ‘yes’ ಎಂದು ಬಳಸಿ. ನಾವು ಕೋರ್ಟ್ ರೂಮಿನಲ್ಲಿದ್ದೇನೆಯೇ ಹೊರತು ಕಾಫಿ ಶಾಪ್ ಅಲ್ಲ ಎಂದು ಹೇಳಿದ್ದಾರೆ.
ಮಾಜಿ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಆಂತರಿಕ ತನಿಖೆಯನ್ನು ಕೋರಿ ವಕೀಲರು ಅರ್ಜಿ ಸಲ್ಲಿಸಿದ್ದರು. ನ್ಯಾಯಾಧೀಶರನ್ನು ಪ್ರತಿವಾದಿಯನ್ನಾಗಿ ಮಾಡಿ PIL ಅನ್ನು ಹೇಗೆ ಸಲ್ಲಿಸಬಹುದು ಎಂದು ಚಂದ್ರಚೂಡ್ ಕೇಳಿದಾಗ, ವಕೀಲರು, “yea, yea, yea, ಆಗಿನ CJI ರಂಜನ್ ಗೊಗೊಯ್ … ನನ್ನನ್ನು ಕ್ಯುರೇಟಿವ್ ಸಲ್ಲಿಸಲು ಕೇಳಲಾಯಿತು ಎಂದು ಹೇಳಿದ್ದಾರೆ.


ಈ ವೇಳೆ ಸಿಜೆಐ ಚಂದ್ರಚೂಡ್, “ಇದು ಕಾಫಿ ಶಾಪ್ ಅಲ್ಲ! ಇದು ಏನು yeah, yeah (ಹೌದು, ಹೌದು)… ನನಗೆ ಇದು ತುಂಬಾ ಅಲರ್ಜಿ, ಇದನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಗೊಗೊಯ್ ಈ ನ್ಯಾಯಾಲಯದ ಮಾಜಿ ನ್ಯಾಯಾಧೀಶರಾಗಿದ್ದರು. ನೀವು ನ್ಯಾಯಾಧೀಶರ ವಿರುದ್ಧ ಈ ರೀತಿ ಮನವಿಯನ್ನು ಸಲ್ಲಿಸಲು ಮತ್ತು ಆಂತರಿಕ ವಿಚಾರಣೆಯನ್ನು ಕೋರಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

Join Whatsapp
Exit mobile version