ವಿಜಯನಗರ: ನಾನು ಯೋಗ ಮಾಡುವುದಿಲ್ಲ. ನಾನು ದೊಡ್ಡ ಸೋಂಬೇರಿ. ಅದರ ಬಗ್ಗೆ ನಾನು ಮಾತನಾಡುವುದು ಸೂಕ್ತವಲ್ಲ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿಶ್ವಪ್ರಸಿದ್ಧ ಹಂಪಿಯಲ್ಲಿ ಮಾತನಾಡಿದ ಅವರು, ನಾನು ಯೋಗ ಮಾಡುವುದಿಲ್ಲ. ನಾನು ದೊಡ್ಡ ಸೋಂಬೇರಿ. ಅದರ ಬಗ್ಗೆ ನಾನು ಮಾತನಾಡುವುದು ಸೂಕ್ತವಲ್ಲ. ಆದರೆ, ಬೇರೆಯವರು ಯೋಗ ಮಾಡುವುದು ನೋಡಿದರೆ ಸ್ಫೂರ್ತಿ ಬರುತ್ತದೆ. ಬರುವ ದಿನಗಳಲ್ಲಿ ಯೋಗ ಮಾಡಲು ಪ್ರಯತ್ನಿಸುತ್ತೇನೆ. ಆರೋಗ್ಯವೇ ಭಾಗ್ಯ. ಯುವಕರು ಆರೋಗ್ಯವಾಗಿದ್ದರೆ ದೇಶದ ಭವಿಷ್ಯ ಉಜ್ವಲವಾಗಿರಲು ಸಾಧ್ಯ ಎಂದು ಹೇಳಿದರು.