ತಿರುವನಂತಪುರಂ: ತನ್ನ ಮ್ಯಾಟ್ರಿಮೋನಿಯಲ್ ಜಾಹೀರಾತಿನಲ್ಲಿ ‘ಸಾಫ್ಟ್ವೇರ್ ಇಂಜಿನಿಯರ್ ಕರೆ ಮಾಡುವುದು ಬೇಡ’ ಎಂದು 24 ವರ್ಷದ ಯುವತಿಯೋರ್ವಳು ವಿಶೇಷ ಸೂಚನೆ ನೀಡಿದ್ದು, ಇದೀಗ ವೈರಲ್ ಆಗಿದೆ.
ಇಂಗ್ಲೀಷ್ನಲ್ಲಿ ನೀಡಲಾದ ಈ ವೈರಲ್ ಜಾಹೀರಾತಿನ ಸಾರ ಹೀಗಿದೆ. ವರ ಬೇಕಾಗಿದ್ದಾನೆ. ಹಿಂದೂ – ಪಿಳ್ಳೈ. 24 ವರ್ಷ 155 ಸೆಂ.ಮೀ. ಉದ್ದ. ವ್ಯಾಪಾರ ಹಿನ್ನೆಲೆಯ ಶ್ರೀಮಂತ ಕುಟುಂಬದ ಸುಂದರ ಯುವತಿ. ಸಮಾನ (ಹಿಂದೂ – ಪಿಳ್ಳೈ) ಕುಟುಂಬದ IAS/IPS, ಡಾಕ್ಟರ್ (ಪಿ.ಜಿ), ಕೈಗಾರಿಕೋದ್ಯಮಿ/ ಉದ್ಯಮಿ ವರ ಬೇಕಾಗಿದ್ದಾನೆ. (ಸಾಫ್ಟ್ವೇರ್ ಇಂಜಿನಿಯರ್ಗಳು ದಯವಿಟ್ಟು ಕರೆ ಮಾಡ ಬೇಡಿ). ಎಂದು ಜಾಹೀರಾತು ನೀಡಿದ್ದು, ಕೊನೆಯಲ್ಲಿ ಮೊಬೈಲ್ ಸಂಖ್ಯೆ ಮತ್ತು ಇ-ಮೈಲ್ ಐಡಿಯನ್ನು ನೀಡಲಾಗಿದೆ.
ಈ ಜಾಹೀರಾತನ್ನು ಕೇರಳದ ಯುವತಿ ನೀಡಿದ್ದು ಎಂದು ತಿಳಿದು ಬಂದಿದೆ. ಆದರೆ ಜಾಹೀರಾತಿನ ಕೊನೆಯಲ್ಲಿ ಆವರಣದೊಳಗಿರುವ ವಿಶೇಷ ಸೂಚನೆಯಿಂದಾಗಿ ಜಾಹೀರಾತು ಪರ ವಿರೋಧ ಚರ್ಚೆಗೆ ಕಾರಣವಾಗಿದೆ.